ನಿಮ್ಮ ಮೊದಲ ಆರೋಗ್ಯ ವಿಮಾ ಯೋಜನೆಯನ್ನು ಹೇಗೆ ಆರಿಸುವುದು – ಖರೀದಿಸುವ ವಿಧಾನಗಳು ಮತ್ತು ಖರೀದಿಸಿದ ಬಳಿಕದ ನಿರೀಕ್ಷೆಗಳು

ತಕ್ಕ ಆರೋಗ್ಯ ವಿಮಾ ಯೋಜನೆಯನ್ನು ಗುರುತಿಸುವುದು ಹೆಚ್ಚಿನ ಜನರಿಗೆ ಕಷ್ಟಕರ ಅನುಭವವಾಗುತ್ತದೆ. ತಿಳುವಳಿಕೆಯಿಂದ ಆಯ್ಕೆ ಮಾಡಲು ಆರೋಗ್ಯ ವಿಮೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ತಕ್ಕ ಆರೋಗ್ಯ ವಿಮಾ ಯೋಜನೆಯನ್ನು ಗುರುತಿಸುವುದು ಹೆಚ್ಚಿನ ಜನರಿಗೆ ಕಷ್ಟಕರ ಅನುಭವವಾಗುತ್ತದೆ.  ಅತಿ ಸಾಧಾರಣ ಯೋಜನೆಯು ಸಹ 40-50 ಭಾಗಗಳನ್ನು ಹೊಂದಿದ್ದು, ಮೊದಲ ಬಾರಿಗೆ ಖರೀದಿಸುವ ವ್ಯಕ್ತಿಯನ್ನು ಗಲಿಬಿಲಿ ಮಾಡಬಹುದು. ವಿಮೆಯ ಪ್ರಮುಖವಾದ ವಿವರಗಳನ್ನು ಮತ್ತು ಲಕ್ಷಣಗಳನ್ನು ನೀವು ನಿರ್ಲಕ್ಷಿಸಬಹುದು. ತಿಳುವಳಿಕೆಯಿಂದ ಆಯ್ಕೆ ಮಾಡಲು ಆರೋಗ್ಯ ವಿಮೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ಆರೋಗ್ಯ ವಿಮಾ ಯೋಜನೆಯು ನಿಮ್ಮ ಜೀವನದುದ್ದಕ್ಕೂ ನಿಮ್ಮನ್ನು ಬೆಂಬಲಿಸುವುದು. ಇದು ನಿಮ್ಮ ಮತ್ತು ನಿಮ್ಮ ವಿಮಾದಾರರ ನಡುವಿನ ಒಪ್ಪಂದವಾಗಿದ್ದು, ಯೋಜಿತ ಮತ್ತು ತುರ್ತಿನ ವೈದ್ಯಕೀಯ ಚಿಕಿತ್ಸೆಗಳ ಸಂದರ್ಭದಲ್ಲಿ ನಿಮ್ಮ ಖರ್ಚನ್ನು ಪೂರೈಸಿ, ನಿಮ್ಮನ್ನು ಆರ್ಥಿಕವಾಗಿ ರಕ್ಷಿಸುತ್ತದೆ. ಆರೋಗ್ಯ ವಿಮೆಯ ಬಗ್ಗೆ ಕೆಲವು ಮುಖ್ಯ ಪ್ರಶ್ನೆಗಳನ್ನು ನಾವು ಇಲ್ಲಿ ಉತ್ತರಿಸಿದ್ದೇವೆ:

1) ನನಗೆ ಆರೋಗ್ಯ ವಿಮೆಯ ಅವಶ್ಯಕತೆ ಇದೆಯೇ?

ಆರೋಗ್ಯ ವಿಮಾ ಯೋಜನೆಯು ನಿಮ್ಮ ಭವಿಷ್ಯದ ಬಂಡವಾಳ. ಇದರ ಅನೇಕ ಪ್ರಯೋಜನಗಳಿವೆ.

  1. ವೈದ್ಯಕೀಯ ಖರ್ಚಿನಲ್ಲಿ ಹಣದುಬ್ಬರವು ಭಾರತದಲ್ಲಿ ಅತ್ಯಧಿಕವಾಗಿದೆ. ಭಾರತೀಯರು ತಮ್ಮ ವೈದ್ಯಕೀಯ ವೆಚ್ಚದ 70% ಕ್ಕಿಂತ ಹೆಚ್ಚು ಹಣವನ್ನು ತಮ್ಮ ಜೇಬಿನಿಂದಲೇ ನೀಡುತ್ತಾರೆ.
  2. ಅನಾರೋಗ್ಯವು  ಇದ್ದಕ್ಕಿದ್ದಂತೆ, ನಿಮ್ಮ ಹಣದ  ಪರಿಸ್ಥಿತಿಯನ್ನು ಲೆಕ್ಕಿಸದೆ ಬರುತ್ತದೆ. ಆರೋಗ್ಯ ವಿಮೆಯು ಇಂತಹ ಸೂಕ್ಷ್ಮದ ಗಳಿಗೆಯಲ್ಲಿ ನಿಮಗೆ ಸುರಕ್ಷತೆಯನ್ನು ಒದಗಿಸುತ್ತದೆ. 
  3. ಆರೋಗ್ಯ ವಿಮೆಯು ಯೋಜಿತ ವೈದ್ಯಕೀಯ ಆರೈಕೆಯ ಖರ್ಚನ್ನು ನೀಡುತ್ತದೆ. ಉದಾಹರಣೆಗೆ, ವಿಶೇಷ ಮಟರ್ನಲ್ ಆರೋಗ್ಯ ನೀತಿಗಳು ಹೆರಿಗೆಗೆ ಸಂಬಂಧಿಸಿದ ಚಿಕಿತ್ಸೆಗಳಿಗೆ ಹಣಕಾಸಿನ ನೆರವು ನೀಡುತ್ತವೆ. ಇವು ದೀರ್ಘಕಾಲದ ಕಾಯಿಲೆಗಳಿಗೆ ಅಗತ್ಯವಾದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಳನ್ನು ಸಮರ್ಥಿಸುತ್ತವೆ.
  4. ಉತ್ತಮ ಆರೋಗ್ಯ ವಿಮಾ ಯೋಜನೆಯು ನಿಮಗೆ ಸರಳವಾದ ಕ್ಲೇಮ್ ಪ್ರಕ್ರಿಯೆ, ಸುಲಭವಾದ ಪ್ರಾಸೆಸ್ಸಿಂಗ್ ಮತ್ತು ವಿಸ್ತಾರವಾದ ಕವರೇಜ್ ಒದಗಿಸುತ್ತದೆ. ಇದರರ್ಥ ನೀವು ಅನಾರೋಗ್ಯದ  ಒತ್ತಡದಲ್ಲಿ ಇದ್ದಾಗ ನಿಮಗೆ ಹಣದ ವ್ಯವಸ್ಥೆ ಮಾಡುವ ಹೆಚ್ಚುವರಿ ಹೊರೆ ಇರುವುದಿಲ್ಲ
  5. ಆರೋಗ್ಯ ವಿಮಾ ಯೋಜನೆಯು ನಿಮಗೆ ಟ್ಯಾಕ್ಸ್ ಉಳಿಸುತ್ತದೆ. ಆರೋಗ್ಯದಲ್ಲಿ ಹೂಡಿಕೆ ಮಾಡುವುದಲ್ಲದೆ ಇದು ನಿಮ್ಮ ವಿಮೆಯು ನೀಡುವ ಮತ್ತೊಂದು ಲಾಭ.

ಉತ್ತಮ ಆರೋಗ್ಯ ವಿಮಾ ಯೋಜನೆಯು ಅಗತ್ಯ ಮಾತ್ರವಲ್ಲ, ಇದು ನಿಮ್ಮ ಆರೋಗ್ಯಕರ ಆರ್ಥಿಕ ಭವಿಷ್ಯದ ತುರ್ತು ಅವಶ್ಯಕತೆ.

2) ಪಾಲಿಸಿಯನ್ನು ಖರೀದಿಸುವ ಮುನ್ನ ಗಮನಿಸುವ ವಿಷಯಗಳು ಯಾವುವು?

  1. ವಿಮೆಯ ಕವರೇಜ್(ರಕ್ಷಣೆ) – ನಿಮ್ಮ ಯೋಜನೆಯು ಯಾವ ಚಿಕಿತ್ಸೆಗಳನ್ನು ಹೊಂದಿದ್ದು, ಅವುಗಳಿಗೆ ಎಷ್ಟು ಖರ್ಚು ನೀಡುತ್ತದೆ ಎಂದು ಸೂಕ್ಷ್ಮವಾಗಿ ಗಮನಿಸಬೇಕು. ಕವರೇಜ್ ಕುಳಿತು ಬಹಳಷ್ಟು ಪ್ರಶ್ನೆಗಳನ್ನು ಕೇಳಬೇಕು – ವಿಮೆ ನೀಡುವ ಮೊತ್ತ ಎಷ್ಟು? ಪಾಲಿಸಿಯು ಆಸ್ಪತ್ರೆಯ ರೂಮ್ ಶುಲ್ಕವನ್ನು ಕೊಡುವುದೇ? ತಪಾಸಣೆಯ ಖರ್ಚನ್ನು ಪೂರೈಸುವುದೇ ? ಫಿಸಿಯೋಥೆರಪಿಸ್ಟ್ ನ ಶುಲ್ಕ ಕೊಡುವುದೇ? ಔಷಧಿಗಳ ಖರ್ಚು ಕೊಡುವುದೇ ? ಈ ರೀತಿಯ ಪ್ರಶ್ನೆಗಳು ವಿಮೆಯ ಕವರೇಜ್ ನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಮತ್ತು ಸರಿಯಾದ ವಿಮೆಯನ್ನು ಆರೈಸಲು ನಿಮಗೆ ಸಹಾಯ ಮಾಡುತ್ತವೆ.
  1. ಕುಟುಂಬ ಯೋಜನೆ ಅಥವಾ ಪರ್ಸನಲ್ ಯೋಜನೆ – ನೀವು ಹೊಸದಾಗಿ ಮದುವೆಯಾಗಿದ್ದರೆ ಅಥವಾ ಕುಟುಂಬವನ್ನು ಪ್ರಾರಂಭಿಸುವುದಾದರೆ ಕುಟುಂಬ ಫ್ಲೋಟರ್ ಯೋಜನೆಯನ್ನು ಆರಿಸಿಕೊಳ್ಳಬಹುದು. ಇಂತಹ ಯೋಜನೆಯು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕುಟುಂಬದ ಎಲ್ಲರಿಗೂ ಕವರೇಜ್ ನೀಡುತ್ತದೆ. 

ನಿಮ್ಮ ಕುಟುಂಬದಲ್ಲಿ ವೃದ್ಧರು ಇದ್ದಲ್ಲಿ, ಪ್ರತಿಯೊಬ್ಬರೂ ಪರ್ಸನಲ್ ಯೋಜನೆಯನ್ನು ಹೊಂದಿರುವುದು ಉತ್ತಮ. ಅಥವಾ ಕುಟುಂಬದ ವಯಸ್ಸಾದವರಿಗೆ ಪರ್ಸನಲ್ ಯೋಜನೆಗಳನ್ನು ಮತ್ತು ಉಳಿದವರಿಗೆ ಕುಟುಂಬ ಯೋಜನೆಯನ್ನು ಖರೀದಿಸಬಹುದು. ವಯಸ್ಸು ಮತ್ತು ಆರೋಗ್ಯ ಪರಿಸ್ಥಿತಿಗಳೊಂದಿಗೆ ಭವಿಷ್ಯದ ವೈದ್ಯಕೀಯ ವೆಚ್ಚಗಳು ಬದಲಾಗಬಹುದು . 

  1. ನನಗೆ ಎಷ್ಟು ಮೊತ್ತದ ಕವರೇಜ್ ಬೇಕಾಗುತ್ತದೆ – ಇದು ನಿಮ್ಮ ವಯಸ್ಸು, ಜೀವನಶೈಲಿ ಮತ್ತು ಪ್ರತ್ಯಕ್ಷ ಆರೋಗ್ಯ ಪರಿಸ್ಥಿಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ನಿಮ್ಮ ಕುಟುಂಬದಲ್ಲಿ ಹಲವರಿಗೆ ಡಯಾಬಿಟೀಸ್ ಇದ್ದು, ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ಮತ್ತು ನಿಮ್ಮ ವಯಸ್ಸು 30 ವರ್ಷಕ್ಕಿಂತ ಹೆಚ್ಚಾಗಿದ್ದರೆ ನಿಮಗೆ ಹೆಚ್ಚಿನ ಕವರೇಜ್ ಬೇಕಾಗುತ್ತದೆ. ಮತ್ತೊಂದೆಡೆ, ನೀವು ಪ್ರಾಯದ ವ್ಯಕ್ತಿಯಾಗಿ, ಆರೋಗ್ಯಕರ ಮತ್ತು ಸ್ವತಂತ್ರರಾಗಿದ್ದರೆ, ನೀವು ಕಡಿಮೆ ಕವರೇಜ್ ಪಡೆಯಬಹುದು. ನಿಮ್ಮ ಭವಿಷ್ಯದ ಅಗತ್ಯಗಳನ್ನು ಅರಿದು ಈ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬೇಕು.
  1. ಒಂದು ಯೋಜನೆ ಸಾಕಾಗುವುದೇ – ಒಂದೇ ವಿಮಾದಾರರಿಂದ ಅಥವಾ ಹಲವು ವಿಮಾದಾರರಿಂದ ಒಂದಕ್ಕಿಂತ ಹೆಚ್ಚು ಆರೋಗ್ಯ ವಿಮಾ ಯೋಜನೆಗಳನ್ನು ಖರೀದಿಸಬಹುದು. ಆದರೆ ಒಂದು ವಿಮೆಯ ಮೊತ್ತವನ್ನು ಸಂಪೂರ್ಣವಾಗಿ ಬಳಸಿದ ನಂತರವೇ ಮತ್ತೊಂದು ವಿಮೆಯ ಮೊತ್ತವನ್ನು ಪ್ರಾಯೋಜಿಸಬಹುದು. ಅಲ್ಲದೆ, ನೀವು ವಿಭಿನ್ನ ಆರೋಗ್ಯ ನೀತಿಗಳನ್ನು ಹೊಂದಿದ್ದೀರಿ ಎಂಬುದನ್ನು ವಿಮಾದಾರರಿಗೆ ತಿಳಿಸಬೇಕು. ಸೂಕ್ತ ಸೋದರ್ಭದಲ್ಲಿ, ನೀವು ಸಣ್ಣ ಪ್ರೀಮಿಯಮ್ ಹೊಂದಿರುವ ಅನೇಕ ಯೋಜನೆಗಳನ್ನು ಹೊಂದಿದ್ದು, ಇವುಗಳು ಕೂಡಿ ನಿಮಗೆ ದೊಡ್ಡ ಮೊತ್ತಿನ ಕವರೇಜ್ ನೀಡುತ್ತವೆ . ಅಗತ್ಯವಾದಾಗ, ಇರುವ ಯೋಜನೆಗಳಲ್ಲಿ ಯಾವುದನ್ನು ಉಪಯೋಗಿಸುವುದೆಂದು  ಪರಿಸ್ಥಿತಿಗೆ ತಕ್ಕಂತೆ ಆರಿಸಬಹುದು.
  1. ಯಾವ ಚಿಕಿತ್ಸೆಗಳನ್ನು ಹೊರಗಿಡಲಾಗಿದೆ – ವಿಮಾ ಯೋಜನೆಯನ್ನು ಚೆನ್ನಾಗಿ ಓದಿ ಯಾವ ಚಿಕಿತ್ಸೆಗಳಿಗೆ ಕವರೇಜ್ ದೊರೆಯುವುದಿಲ್ಲ ಎಂದು ತಿಳಿದುಕೊಳ್ಳುವುದು ಮುಖ್ಯ. ಉದಾಹರಣೆಗೆ, ಕೆಲವು ಆರೋಗ್ಯ ಯೋಜನೆಗಳು ಲೈಂಗಿಕ ರೋಗಗಳ ಚಿಕಿತ್ಸೆ, ಹರ್ನಿಯಾ, ಕ್ಯಾಟರಾಕ್ಟ್  ಮುಂತಾದವುಗಳನ್ನು ಹೊರಗಿಡಬಹುದು. ಹೊರತುಪಡಿಸಿದ ಅಂಶಗಳನ್ನು ನೀತಿಯಲ್ಲಿ ನಿರ್ದೇಶಿಸಲಾಗುತ್ತದೆ. ಇಂತಹ  ವಿನಾಯಿತಿಗಳು ಕಡಿಮೆ ಸಂಖ್ಯೆಯಲ್ಲಿ ಹೊಂದಿರುವ ಯೋಜನೆಯನ್ನು ಆರಿಸಬೇಕು.
  1. ಸಬ್ ಲಿಮಿಟ್ ಮತ್ತು ಸೂಕ್ಷ್ಮ ವಿವರಗಳು – ಕೆಲವು ವೈದ್ಯಕೀಯ ಖರ್ಚುಗಳಿಗೆ ವಿಮೆಯ ಕವರೇಜ್ ಮೊತ್ತದ ನಿಯಮಿತ ಭಾಗ ಮಾತ್ರ ದೊರೆಯುತ್ತದೆ. ಈ ಮಿತಿಗಳನ್ನು ಸಬ್-ಲಿಮಿಟ್ ಎನ್ನುತ್ತಾರೆ. ಉದಾಹರಣೆಗೆ, ಆಸ್ಪತ್ರೆಯ ಹಾಸಿಗೆ ಶುಲ್ಕದ ಮೇಲೆ ದಿನಕ್ಕೆ 2,000 ರೂ.ಗಳ ಸಬ್-ಲಿಮಿಟ್ ಇರಬಹುದು. ಆಸ್ಪತ್ರೆಗೆ ದಾಖಲಾದರೆ ನಿಮ್ಮ ವಿಮೆ ಹಾಸಿಗೆಗೆ ದಿನಕ್ಕೆ 2,000 ರೂ. ಮಾತ್ರ ಒದಗಿಸುತ್ತದೆ. ಕ್ಯಾಟರಾಕ್ಟ್ ನಂತಹ ನಿರ್ದಿಷ್ಟ ಚಿಕಿತ್ಸೆಗಳಿಗೆ ಸಬ್-ಲಿಮಿಟ್ ಇದ್ದು, ವಿಮೆಗಳು ಇವುಗಳಿಗೆ ಮೊದಲೇ ಅಂಕಿಸಿದ ಮಿತಿಯಷ್ಟರ ಹಣವನ್ನು ಮಾತ್ರ ಕೊಡುತ್ತವೆ. ನಿಮ್ಮ ಯೋಜನೆಯ ಪ್ರತಿಯೊಂದು ಸಬ್-ಲಿಮಿಟ್ ನ್ನು ಎಚ್ಚರಿಕೆಯಿಂದ ಓದಿ ವಿಮೆಯನ್ನು ಖರೀದಿಸಬೇಕು.
  1. ವೈಟಿಂಗ್ ಪಿರಿಯಡ್  (ಕಾಯುವ ಅವಧಿ) – ನಿಮ್ಮ ವಿಮೆಯು ವೈಟಿಂಗ್ ಪಿರಿಯಡ್  ನಂತರದ ವೈದ್ಯಕೀಯ ಖರ್ಚುಗಳನ್ನು ಮಾತ್ರ  ಪೂರೈಸುತ್ತದೆ. ನಿಮ್ಮ ಕವರೇಜ್ ಕ್ಲೈಮ್-ಮುಕ್ತ ವೈಟಿಂಗ್ ಪಿರಿಯಡ್ ನಂತರ ಪ್ರಾರಂಭವಾಗುತ್ತದೆ, ಅದು ಹೆಚ್ಚಿನ ಸಂದರ್ಭಗಳಲ್ಲಿ 1-2 ವರ್ಷಗಳ ಅವಧಿಯಾಗಿರುತ್ತದೆ. ನಿಮಗೆ ಡಯಾಬಿಟೀಸ್, ಥೈರಾಯ್ಡ್, ಹೃದಯದ ಕಾಯಿಲೆ ಮುಂತಾದ ಅನಾರೋಗ್ಯ ಪರಿಸ್ಥಿತಿಗಳು ಇದ್ದಲ್ಲಿ ವಿಮೆಯು ಕಡ್ಡಾಯವಾಗಿ 2-4 ವರ್ಷಗಳ ವೈಟಿಂಗ್ ಪಿರಿಯಡ್ ಹೊಂದಿರುತ್ತದೆ. ನೀವು ಕುಟುಂಬವನ್ನು ಪ್ರಾರಂಭಿಸುವ ದೃಷ್ಟಿಯಿಂದ ಮಟರ್ನಲ್ ಆರೋಗ್ಯ ವಿಮೆಯನ್ನು ಪಡೆದರೆ,  ಅವುಗಳು 1-2 ವರ್ಷಗಳ ವೈಟಿಂಗ್ ಪಿರಿಯಡ್ ಹೊಂದಿರುತ್ತವೆ. ಯೋಜಿತ ಹಾಗೂ ತುರ್ತು ಚಿಕಿತ್ಸೆಗಳಿಗೆ ವಿಮೆಯಲ್ಲಿ ಅಂಕಿಸಿರುವ ಕಾಯುವ ಅವಧಿಗಳನ್ನು ತಿಳಿದುಕೊಂಡು ವಿಮೆಯನ್ನು ಖರೀದಿಸಬೇಕು.

3) ವಿಮಾ ಪಾಲಿಸಿಯನ್ನು ಎಲ್ಲಿಂದ ಖರೀದಿಸಲಿ?

ವಿಮೆಯ ನ್ನು ಕುರಿತು ಸಂಶೋಧನೆ ಮಾಡಿದ ನಂತರ ನೀವು ಆನ್‌ಲೈನ್‌, ಆರೋಗ್ಯ ವಿಮಾ ಏಜೆಂಟರನ್ನು ಸಂಪರ್ಕಿಸುವ ಮೂಲಕ ಅಥವಾ ವಿಮಾದಾರರ ಕಚೇರಿಗೆ ಭೇಟಿ ನೀಡುವುದರ ಮೂಲಕ ಪಾಲಿಸಿಯನ್ನು ಖರೀದಿಸಬಹುದು. OneAssure ನಿಮಗೆ ಸಹಾಯ ನೀಡುವುದು – ನೀವು ಯೋಜನೆಯನ್ನು ಖರೀದಿಸುವ ಮೊದಲು ನಮ್ಮ ತರಬೇತಿ ಪಡೆದ ಪಾರ್ಟ್ನರ್ ರೊಂದಿಗೆ ನಿಮ್ಮ ಅನುಮಾನ ಮತ್ತು ಸಂಶಯಗಳನ್ನು ಚರ್ಚಿಸಿ ಸ್ಪಷ್ಟಪಡಿಸಬಹುದು. 

ಆರೋಗ್ಯ ವಿಮೆಯು ನಿಮಗೆ ಉತ್ತಮ ವೈದ್ಯಕೀಯ ಆರೈಕೆ ದೊರಕಿಸುತ್ತದೆ. ಇದನ್ನು ನಿರ್ಲಕ್ಷಿಸದೆ, ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ತಕ್ಕ ನೀತಿಯನ್ನು ಶೋಧಿಸಲು ಸಮಯ ನೀಡಿ  ಮತ್ತು ಒಳ್ಳೆಯ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿ. ಆರೋಗ್ಯವೇ ಸಂಪತ್ತು, ಅಲ್ಲವೇ?

Image Credit : Flickr / www.BoldContentVideo.com

ಒನ್‌ಅಶ್ಯೂರ್ ಡಿಸ್ಟ್ರಿಬ್ಯೂಶನ್ ಪ್ಲಾಟ್ ಫಾರ್ಮ್ ಆಗಿದ್ದು, ಆರೋಗ್ಯ ಮತ್ತು ಹಣಕಾಸು ಒಗ್ಗೂಡುವ ವಿಷಯಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ವಿಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು oneassure.in ಗೆ ಭೇಟಿ ನೀಡಿ.

    Request for a free health insurance consultation

    Fields marked with an * are required


    Leave a Reply

    Your email address will not be published.