ಕುಟುಂಬ ಫ್ಲೋಟರ್ ವಿಮಾ ಯೋಜನೆಯನ್ನು ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ 5 ವಿಷಯಗಳು

ನಿಮ್ಮ ಕುಟುಂಬದ ಎಲ್ಲರಿಗೂ ವಿಮೆಯ ರಕ್ಷಣೆ ಇರುವುದು ಅತ್ಯಗತ್ಯ. ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮಾ ಯೋಜನೆಯು ನಿಮ್ಮ ಕುಟುಂಬವನ್ನು ತುರ್ತು ವೈದ್ಯಕೀಯ ವೆಚ್ಚಗಳಿಂದ ರಕ್ಷಿಸುತ್ತದೆ.

ಆರೋಗ್ಯವೇ ಸಂಪತ್ತು ಎಂಬುವುದು ಪ್ರಾಚೀನ ಹೇಳಿಕೆ. ಭಾರತದಲ್ಲಿ ಸ್ವಾಸ್ಥ್ಯ ಸೇವೆಯು ತುಂಬಾ ದುಬಾರಿ. ನಿಮ್ಮ ಕುಟುಂಬದ ಯಾರಾದರೂ ಅಸ್ವಸ್ಥರಾಗಿ, ಅವರಿಗೆ ತುರ್ತು ಚಿಕಿತ್ಸೆ ನೀಡಬೇಕಾದ ಸಂದರ್ಭದಲ್ಲಿ, ನಿಮ್ಮ ಜೀವನಪೂರ್ತಿಯ ಉಳಿತಾಯ ಅಳಿಸಿಹೋಗಬಹುದು. ಅತ್ಯುತ್ತಮ ಚಿಕಿತ್ಸೆಯನ್ನು ಪಾವತಿಸಲಾಗದ ಕಾರಣ ಮನೆಯ ಸದಸ್ಯರೊಬ್ಬರನ್ನು ನೀವು ಕಳೆದುಕೊಳ್ಳಬಹುದು, ಯೋಚಿಸಿ! ಆದ್ದರಿಂದ, ನಿಮ್ಮ ಕುಟುಂಬದ ಎಲ್ಲರಿಗೂ ವಿಮೆಯ ರಕ್ಷಣೆ ಇರುವುದು ಅತ್ಯಗತ್ಯ. ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮಾ ಯೋಜನೆಯು,  ಪ್ರತಿವರ್ಷ ಅತ್ಯಲ್ಪ ಪ್ರೀಮಿಯಂ ದರಕ್ಕೆ, ನಿಮ್ಮ ಕುಟುಂಬವನ್ನು ತುರ್ತು ವೈದ್ಯಕೀಯ ವೆಚ್ಚಗಳಿಂದ ರಕ್ಷಿಸುತ್ತದೆ.

ಉತ್ತಮ ಆರೋಗ್ಯ ಯೋಜನೆಗಳು ಸಹ ಪ್ರತಿಯೊಂದು ಪರಿಸ್ಥಿತಿಯಲ್ಲಿ ಸಂಪೂರ್ಣ ರಕ್ಷಣೆ ನೀಡುವುದಿಲ್ಲ. ಆದ್ದರಿಂದ, ನಿಮ್ಮ ನೀತಿಯಲ್ಲಿ ಉಲ್ಲೇಖಿಸಿರುವ  ಷರತ್ತುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕುಟುಂಬ ಆರೋಗ್ಯ ವಿಮೆಯನ್ನು ಆರಿಸಿಕೊಳ್ಳುವ ಮುನ್ನ ಗಮನಿಸಬೇಕಾದ ಐದು ಪ್ರಮುಖ ವಿಷಯಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ:

ಸ್ವಯಂ ಉದ್ಯೋಗಿ ಮತ್ತು ಸಂಬಳ ಪಡೆಯುವ ವ್ಯಕ್ತಿ

ನೀವು ಸ್ವಯಂ ಉದ್ಯೋಗಿ ಅಥವಾ ಉದ್ಯಮಿಯಾಗಿದ್ದರೆ, ನಿಮ್ಮ ಕುಟುಂಬಕ್ಕೆ ಆರೋಗ್ಯ ವಿಮಾ ಪಾಲಿಸಿಯು ಅತ್ಯವಶ್ಯಕ. ಈ ಭದ್ರತಾ ಕ್ರಮವು, ನೀವು ನಿಮ್ಮ ಕುಟುಂಬಕ್ಕೆ ನೀಡುವ ಶ್ರೇಷ್ಠ ಉಡುಗೊರೆ.

ನೀವು ಸಂಬಳ ಪಡೆಯುವ ವ್ಯಕ್ತಿಯಾಗಿದ್ದರೆ, ಎಂಪ್ಲಾಯರ್ ನಿಮ್ಮಗೆ ಮತ್ತು ನಿಮ್ಮ ಕುಟುಂಬದವರಿಗೆ ಕಾರ್ಪೊರೇಟ್ ಆರೋಗ್ಯ ವಿಮೆಯನ್ನು ಒದಗಿಸಿರಬಹುದು. ಆದರೆ ಆ ರಕ್ಷಣೆಯು ಅನೇಕ  ಸಂದರ್ಭಗಳಲ್ಲಿ ಸಾಲದಾಗಬಹುದು. ನೀವು ಸಂಸ್ಥೆಯನ್ನು ಬಿಟ್ಟರೆ ಅಥವಾ ಸಂಸ್ಥೆಯು ಯೋಜನೆಯನ್ನು ಮುಂದುವರಿಸದಿದ್ದರೆ, ನೀವು ವಿಮಾ ರಕ್ಷಣೆಯನ್ನು ಕಳೆದುಕೊಳ್ಳುವಿರಿ. ಆದ್ದರಿಂದ, ನಿಮ್ಮ ಕಾರ್ಪೊರೇಟ್ ಯೋಜನೆಗೆ ಮತ್ತೊಂದು ಫ್ಯಾಮಿಲಿ ಫ್ಲೋಟರ್ ಯೋಜನೆಯನ್ನು ಜೋಡಿಸುವುದು ಉತ್ತಮ.

ತಕ್ಕ ಕವರೇಜ್ ಮೊತ್ತವನ್ನು ಗುರುತಿಸುವುದು

ವಿಮೆಯ ಕವರೇಜ್ ಮೊತ್ತವನ್ನು ನಿರ್ಧರಿಸುವಾಗ, ನೀವು ವಾಸಿಸುವ ನಗರದಲ್ಲಿ ಸ್ವಾಸ್ಥ್ಯ ಸೇವೆಯ ವೆಚ್ಚವನ್ನು ಗಮನದಲ್ಲಿಡಬೇಕು. ಮಹಾನಗರದಲ್ಲಿ ವಾಸಿಸುವವರಿಗೆ ಕನಿಷ್ಠ 15 ಲಕ್ಷ ರೂ. ಗಳ ಕವರೇಜ್ ಬೇಕಾಗುತ್ತದೆ. ನಿಮ್ಮ ಕುಟುಂಬದ ಗಾತ್ರವನ್ನು ಕೂಡ ಲೆಕ್ಕಿಸಬೇಕಾಗುತ್ತದೆ. ಹೆಚ್ಚಿನ ಮೊತ್ತದ ಯೋಜನೆಯು ಯಾವಾಗಲೂ ಹೆಚ್ಚಿನ ಪ್ರೀಮಿಯಂ ಹೊಂದಿರುತ್ತದೆ. ಆದ್ದರಿಂದ, ನೀವು ನಿಮ್ಮ ಬಜೆಟ್ ಅನ್ನು ಅದಕ್ಕೆ ತಕ್ಕಂತೆ ಯೋಜಿಸಬೇಕಾಗುತ್ತದೆ. 

ಪ್ರೀಮಿಯಂ ಸಾಮಾನ್ಯವಾಗಿ ವಿಮೆಯಲ್ಲಿ ಸೇರುವ ಕುಟುಂಬದ ಸದಸ್ಯರಲ್ಲಿ ಹಿರಿಯ ಸದಸ್ಯರ ವಯಸ್ಸನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಕುಟುಂಬದಲ್ಲಿ ಹಿರಿಯರಿದ್ದರೆ, ಅವರಿಗೆಂದು ಹಿರಿಯ ನಾಗರಿಕ-ನಿರ್ದಿಷ್ಟ ಯೋಜನೆಯನ್ನು ಖರೀದಿಸಿ. ಇದು ಅವರ ವಿಶಿಷ್ಠ ಅಗತ್ಯಗಳನ್ನು ಪೂರೈಸುತ್ತದೆ.

ವಿಮಾದಾರರ ಆಸ್ಪತ್ರೆಗಳ ಜಾಲ

ನೀವು ಮಾಡಿದ ವಿಮೆಯ ಕ್ಲೇಮ್ ಅನ್ನು ಪಾವತಿಸುವ ಎರಡು ವಿಧಾನಗಳಿವೆ. ನೀವು ಮೊದಲಿಗೆ ನಿಮ್ಮ ಜೇಬಿನಿಂದ ಚಿಕಿತ್ಸೆಗೆ ಹಣವನ್ನು ನೀಡಿ, ಅದನ್ನು ನಿಮ್ಮ ವಿಮಾದಾರರು ನಂತರ ಹಿಂದಿರುಗಿಸಬಹುದು; ಅಥವಾ ನೀವು ನಿಮ್ಮ ವಿಮಾದಾರ-ನಿಯುಕ್ತ ಆಸ್ಪತ್ರೆಗೆ ಭೇಟಿ ನೀಡಿ, ಯಾವುದೇ ಹಣವನ್ನು ನೀಡದೆ ಚಿಕೆತ್ಸೆಯನ್ನು ಪಡೆಯಬಹುದು. ಅಂತಹ ಹಣವಿಲ್ಲದ ವ್ಯವಹಾರಗಳು ಸರಳವಾಗಿದ್ದು, ನಿಮಗೆ ತುಂಬಾ ತೊಂದರೆಗಳಿಂದ ಕಾಪಾಡುತ್ತವೆ. ಆದ್ದರಿಂದ, ನಿಮ್ಮ ಸುತ್ತಮುತ್ತಲು ನಿಮ್ಮ ವಿಮಾ ಕಂಪನಿ-ನಿಯುಕ್ತ ಆಸ್ಪೆತ್ರೆಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ಗರ್ಭಧಾರಣೆ ಮತ್ತು ಹೆರೆಡಿಟರಿ ಕಾಯಿಲೆಗಳು

ವಿಮಾ ಯೋಜನೆಯು ರಕ್ಷಣೆ ನೀಡದ ಚಿಕಿತ್ಸೆಗಳ ಬಗ್ಗೆ ಮತ್ತು ವೈಟಿಂಗ್ ಪಿರಿಯಡ್ (ಕಾಯುವ ಅವಧಿ) ಸಂಬಂಧಿಸಿದ ಷರತ್ತುಗಳ ಬಗ್ಗೆ ಓದುವುದು ಅನಿವಾರ್ಯ . ಅನೇಕ ಆರೋಗ್ಯ ವಿಮೆಗಳು ಗರ್ಭಧಾರಣೆ ಮತ್ತು ಸಂಬಂಧಿತ ಚಿಕಿತ್ಸೆಗಳಿಗೆ ಕವರೇಜ್ ನೀಡುವುದಿಲ್ಲ. ಹಾಗೂ, ಕೆಲವು ವಿಮೆಗಳು ಹೆರಿಡಿಟರಿ ಕಾಯಿಲೆಗಳನ್ನು ಹೊರಗಿಡುತ್ತವೆ ಅಥವಾ ಅವುಗಳಿಗೆ ದೀರ್ಘ ಕಾಯುವ ಅವಧಿಯನ್ನು ಹೊಂದಿರುತ್ತವೆ. ಆದ್ದರಿಂದ, ಯೋಜನೆಯನ್ನು ಆರಿಸುವ ಮುನ್ನ ನಿಮ್ಮ ಕುಟುಂಬದ ಆರೋಗ್ಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಅಲ್ಲದೆ, ನಿಮ್ಮ ಆರೋಗ್ಯ ವಿಮಾ ಯೋಜನೆಯು, ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಪ್ರತಿ ವರ್ಷ ಆರೋಗ್ಯ ತಪಾಸಣೆಗೆ ಸಹಕಾರ ನೀಡುವುದೇ ಎಂದು ಖಾಚಿತಪಡಿಸಿಕೊಳ್ಳಬೇಕು.

ಮಾಹಿತಿಯನ್ನು ಮುಚ್ಚಿಡಬೇಡಿ

ಯೋಜನೆಯನ್ನು ಖರೀದಿಸುವಾಗ, ನಿಮ್ಮ ಅಥವಾ ನಿಮ್ಮ ಕುಟುಂಬದ ಸದಸ್ಯರ ಅನಾರೋಗ್ಯ ಪರಿಸ್ಥಿತಿಗಳ ಮಾಹಿತಿಯನ್ನು ವಿಮಾದಾರರಿಗೆ ನೀಡಬೇಕು. ಸುಳ್ಳು ಹೇಳುವುದರಿಂದ ವಿಮಾದಾರರು ನಿಮ್ಮ ಕ್ಲೇಮ್ ತಿರಸ್ಕರಿಸಬಹುದು. ನೀವು ಮದ್ಯಪಾನ ಮಾಡುವುದಾದರೆ ಅಥವಾ ತಂಬಾಕು ಸೇವಿಸುವುದಾದರೆ ನಿರ್ದಿಷ್ಟವಾಗಿ ಈ ಸಲಹೆಯನ್ನು ಅನುಸರಿಸಿ. ಸತ್ಯವನ್ನು ಹೇಳುವುದರಿಂದ ನೀವು ಸ್ವಲ್ಪ ಹೆಚ್ಚಿನ ಪ್ರೀಮಿಯಂ ಕೊಡಬೇಕಾಗಬಹುದು, ಆದರೆ ಕ್ಲೈಮ್ ಪ್ರಕ್ರಿಯೆಯಲ್ಲಿ ಇದು ನಿಮಗೆ ಸಾಕಷ್ಟು ತೊಂದರೆಗಳಿಂದ ಉಳಿಸುತ್ತದೆ.

Image by JudaM from Pixabay.

ಒನ್‌ಅಶ್ಯೂರ್ ಡಿಸ್ಟ್ರಿಬ್ಯೂಶನ್ ಪ್ಲಾಟ್ ಫಾರ್ಮ್ ಆಗಿದ್ದು, ಆರೋಗ್ಯ ಮತ್ತು ಹಣಕಾಸು ಒಗ್ಗೂಡುವ ವಿಷಯಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ವಿಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು oneassure.in ಗೆ ಭೇಟಿ ನೀಡಿ.

    Request for a free health insurance consultation

    Fields marked with an * are required


    Leave a Reply

    Your email address will not be published.