ಆರೋಗ್ಯ ವಿಮೆಯನ್ನು ಖರೀದಿಸುವಾಗ ಜನರು ನಿರ್ಲಕ್ಷಿಸುವ 5 ಪ್ರಮುಖ ವಿಷಯಗಳು

ಪರಿಪೂರ್ಣ ಆರೋಗ್ಯ ವಿಮಾ ಯೋಜನೆಯನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ .

ಪರಿಪೂರ್ಣ ಆರೋಗ್ಯ ವಿಮಾ ಯೋಜನೆಯನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಹಲವಾರು ವಿಮಾದಾರರು ದೊರಕಿಸುವ ಹಲವು ಯೋಜನೆಗಳಿವೆ. ಅತಿ ಸಾಧಾರಣ ಯೋಜನೆಯು ಸಹ 40-50 ಭಾಗಗಳನ್ನು ಹೊಂದಿದ್ದು, ಸಾಮಾನ್ಯ ವ್ಯಕ್ತಿಯನ್ನು ಗಲಿಬಿಲಿ ಮಾಡಬಹುದು. ನೀವು ವಿಮಾ ಏಜೆಂಟರಿಂದ ಖರೀದಿಸಿದರೆ, ಅವರು ಕೆಲವು ವಿಷಯಗಳನ್ನು ಹೇಳಲು ಮರೆಯಬಹುದು, ಅಥವಾ ನೀವು ಮುಖ್ಯ ಪ್ರಶ್ನೆಗಳನ್ನು ಕೇಳದಿರಬಹುದು. ತನಗೆ ಯೋಜನೆಯು ಸ್ಥೂಲವಾಗಿ ಅರ್ಥವಾಗಿದೆ ಎಂದು ತಿಳಿದು, ಖರೀದಿಸುವ ಮುನ್ನ ನೀವು ಅದರ ವಿವರಗಳನ್ನು ಓದದಿರಬಹುದು. ಈ ತಪ್ಪುಗಳಿಂದ ನಿಮಗೆ ಭವಿಷ್ಯದಲ್ಲಿ ತೊಂದರೆ ಆಗಬಹುದು.

ಜನರು ಸಾಮಾನ್ಯವಾಗಿ ನಿರ್ಲಕ್ಷಿಸುವ ವಿಮಾ ಯೋಜನೆಯ ಅಂಶಗಳು ಯಾವುವು? ಇಂತಹ ತಪ್ಪ್ಪುಗಳಿಂದ ತಮ್ಮನ್ನು ಹೇಗೆ ಬಚಾಯಿಸುವುದು? ನೋಡೋಣ ಬನ್ನಿ:

1. ಸಾಲದಾದ ಕವರೇಜ್ ಪಡೆಯುವುದು

ವಿಮೆ ಖರೀದಿಯಲ್ಲಿ ಪ್ರೀಮಿಯಂ ಪ್ರಮುಖ ಪಾತ್ರವಹಿಸುತ್ತದೆ.  ಆದರೆ ಕಡಿಮೆ ಪ್ರೀಮಿಯಂ ಹೊಂದಿರುವ ಪಾಲಿಸಿಗಳು ಕಡಿಮೆ ಕವರೇಜ್ ನೀಡುತ್ತವೆ.ಇವು ಅಲ್ಪಾವಧಿಯಲ್ಲಿ ಹಣ ಉಳಿಸಬಹುದು, ಆದರೆ ನಂತರ ನಿರುಪಯುಕ್ತವಾಗುತ್ತವೆ. ತಮ್ಮ ಆರೋಗ್ಯ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿ, ಅವಲಂಬಿತರ ವೈದ್ಯಕೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟು, ಸಾಕಷ್ಟು ಕವರೇಜ್ ನೀಡುವ ಯೋಜನೆಯನ್ನು ಆಯ್ಕೆಮಾಡಿ. 

2. ಸಬ್-ಲಿಮಿಟ್  ಗಳನ್ನು ಗುರುತಿಸದಿರುವುದು

ಕೆಲವು ‘ಸಂಬಂಧಿತ’ ವೈದ್ಯಕೀಯ ಖರ್ಚುಗಳಿಗೆ ವಿಮೆಯ ಕವರೇಜ್ ಮೊತ್ತದ ನಿಯಮಿತ ಭಾಗ ಮಾತ್ರ ದೊರೆಯುತ್ತದೆ. ಈ ಮಿತಿಗಳನ್ನು ಸಬ್-ಲಿಮಿಟ್ ಎನ್ನುತ್ತಾರೆ. ಉದಾಹರಣೆಗೆ, ರೂಮ್ ಬಾಡಿಗೆ ಅಥವಾ ಹಾಸಿಗೆ ಶುಲ್ಕಗಳಿಗೆ ಸಬ್-ಲಿಮಿಟ್ ಇರುತ್ತದೆ. ಇದರರ್ಥ ಆಸ್ಪತ್ರೆಗೆ ದಾಖಲಾದರೆ, ರೂಮ್ ಬಾಡಿಗೆ  ಸಬ್-ಲಿಮಿಟ್ ನ್ನು ಮೀರಿದರೆ , ಹೆಚ್ಚಿನ ಶುಲ್ಕವನ್ನು ರೋಗಿಯು ಕೊಡಬೇಕಾಗುತ್ತದೆ. 

ಕ್ಯಾಟರಾಕ್ಟ್, ಕಿಡ್ನಿ ಸ್ಟೋನ್ಸ್, ಟಾನ್ಸಿಲ್ಸ್, ಸೈನಸ್, ಮೊಣಕಾಲಿನ ಆಪರೇಷನ್, ಹರ್ನಿಯ ಮುಂತಾದ ಚಿಕಿತ್ಸೆಗಳಿಗೆ ಸಬ್-ಲಿಮಿಟ್  ಇದ್ದು, ಹೆಚ್ಚುವರಿ ಶುಲ್ಕವನ್ನು ರೋಗಿಯು ವಹಿಸಬೇಕಾಗುತ್ತದೆ.

ಇದಲ್ಲದೆ, ನಿಮ್ಮ ವಿಮಾ ಯೋಜನೆಯಲ್ಲಿ ನಿರ್ದೇಶಿಸಿದಂತೆ ಆಂಬ್ಯುಲೆನ್ಸ್ ಶುಲ್ಕ, ಆಕ್ಸಿಜನ್ ಸಪ್ಲೈ , ವೈದ್ಯರ ಶುಲ್ಕ, ಅನೆಸ್ಥೆಷ್ಯಾ ತಜ್ಞರ ಶುಲ್ಕ ಮತ್ತು ರೋಗದ ಪರೀಕ್ಷೆಯ ಶುಲ್ಕಗಳಿಗೆ  ಸಬ್-ಲಿಮಿಟ್ ಇರಬಹುದು. ಹೆಚ್ಚಾಗಿ ಜನರು ಯೋಜನೆಯನ್ನು ಖರೀದಿಸುವಾಗ ಸಬ್-ಲಿಮಿಟ್ ಗಳನ್ನು ನಿರ್ಲಕ್ಷಿಸಿ, ನಂತರ ತಾವೇ ಈ ಖರ್ಚುಗಳನ್ನು ಕೊಡಬೇಕಾಗುತ್ತದೆ.

ಸಬ್-ಲಿಮಿಟ್ ಗಳು ಇಲ್ಲದ ಯೋಜನೆಗಳ ಪ್ರೀಮಿಯಂ ದುಬಾರಿಯಾಗಿರುತ್ತದೆ. ನಿಮ್ಮ ಯೋಜನೆಯ ಪ್ರತಿಯೊಂದು ಸಬ್-ಲಿಮಿಟ್ ನ್ನು ಸ್ಪಷ್ಟವಾಗಿ ಓದಿ ಅರ್ಥಮಾಡಿಕೊಳ್ಳುವುದು ಅವಶ್ಯಕ.

3. ವೈಟಿಂಗ್ ಪಿರಿಯಡ್  (ಕಾಯುವ ಅವಧಿ) ನಿರ್ಲಕ್ಷಿಸುವುದು 

ನಿಮ್ಮ ಆರೋಗ್ಯ ವಿಮಾ ಯೋಜನೆಯು ಎಲ್ಲ ವೈದ್ಯಕೀಯ ಖರ್ಚುಗಳನ್ನು ಪೂರೈಸುವುದಿಲ್ಲ ಹಾಗೂ, ಕೆಲವು ಚಿಕಿತ್ಸೆಗಳ ಖರ್ಚನ್ನು ವೈಟಿಂಗ್ ಪಿರಿಯಡ್ ನಂತರ ಪೂರೈಸುತ್ತದೆ. ಪಾಲಿಸಿಯನ್ನು ಓದಿ, ಸೂಚಿಸದ ಈ ಎರಡು ಷರತ್ತುಗಳಿಗೆ ಯಾವ ಚಿಕಿತ್ಸೆಗಳು ಒಳಗಾಗುತ್ತವೆ ಎಂದು ತಿಳಿಯುವುದು ಅನಿವಾರ್ಯ. ಉದಾಹರಣೆಗೆ:

  1. ಗರ್ಭಧಾರಣೆಗೆ ಸಂಬಂಧಿಸಿದ ಚಿಕಿತ್ಸೆಗಳು – ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದ ಯಾವುದೇ ಚಿಕಿತ್ಸೆಗಳಿಗೆ ಸಾಮಾನ್ಯ ಆರೋಗ್ಯ ನೀತಿಗಳು ರಕ್ಷಣೆ (ಕವರೇಜ್) ನೀಡುವುದಿಲ್ಲ. ಇವುಗಳಿಗೆ ವಿಶೇಷ ಮಟರ್ನಲ್ ಆರೋಗ್ಯ ನೀತಿಗಲು ದೊರೆಯುತ್ತವೆ. 2-3 ವರ್ಷಗಳ ವೈಟಿಂಗ್ ಪಿರಿಯಡ್ ನಂತರ ಇವುಗಳ ಕವರೇಜ್ ಪ್ರಾರಂಭವಾಗುತ್ತದೆ.
  2. ಪೂರ್ವ ಆರೋಗ್ಯ ಪರಿಸ್ಥಿತಿ – ಆಸ್ತಮಾ, ಹೃದಯಾದ ಕಾಯಿಲೆ, ಅಧಿಕ ಬ್ಲಡ್ ಪ್ರೆಶರ್ ಮುಂತಾದ ಆರೋಗ್ಯ ಪರಿಸ್ಥಿತಿಗಳು ಇದ್ದಲ್ಲಿ ಸಾಮಾನ್ಯ ವಿಮಾದಾರರು ಕವರೇಜ್ ನೀಡುವುದಿಲ್ಲ.ನೀಡಿದ ಬಳಿಕ, ವಿಮಾ ಯೋಜನೆಯು 2-4 ವರ್ಷಗಳ ವೈಟಿಂಗ್ ಪಿರಿಯಡ್ ಹೊಂದಿರುತ್ತದೆ . ಅವಧಿಯು ವಿಮಾದಾರ,  ನಿಮ್ಮ ಪೂರ್ವ ಆರೋಗ್ಯ ಸ್ಥಿತಿ ಮತ್ತು ಸ್ಥಿತಿಗೆ ಸಂಬಂಧಿಸಿದ ಅಪಾಯಗಳ ಮೇಲೆ ಅವಲಂಬಿತವಾಗಿರುತ್ತದೆ.
  3. ದಂತ, ಶ್ರವಣ ಮತ್ತು ದೃಷ್ಟಿ – ಇವುಗಳಿಗೆ  ಸಂಬಂಧಿಸಿದ ಚಿಕಿತ್ಸೆಗಳಿಗೆ ಯೋಜನೆಯು ಕವರೇಜ್ ನೀಡುವುದಿಲ್ಲ. ಆಸ್ಪತ್ರೆ-ದಾಖಲು ಸಂದರ್ಭಗಳಿಗೆ ಕೆಲವು ಆರೋಗ್ಯ ಯೋಜನೆಗಳಲ್ಲಿ ಆಡ್-ಆನ್ ಆಗಿ ಕವರೇಜ್ ಖರೀದಿಸಬಹುದು. 
  4. ಕಾಸ್ಮೆಟಿಕ್ ಚಿಕಿತ್ಸೆ – ವೈದ್ಯಕೀಯ ಅವಶ್ಯಕತೆಯ ಸಂದರ್ಭದಲ್ಲಿ ಮಾತ್ರ ಕಾಸ್ಮೆಟಿಕ್ ಚಿಕಿತ್ಸೆಗೆ ಕವರೇಜ್ ಸಿಗುತ್ತದೆ. ಸೌಂದರ್ಯ ಹೆಚ್ಚಿಸುವ ಕಾಸ್ಮೆಟಿಕ್ ಚಿಕಿತ್ಸೆಗಳು ಆರೋಗ್ಯ ಯೋಜನೆಗೆ  ಸೇರುವುದಿಲ್ಲ . 

4. ಮೆಡಿಕಲ್ ಹಿಸ್ಟ್ರಿಯನ್ನು ಮುಚ್ಚಿಡುವುದು

ತನಗೆ ವಿಮಾ ಯೋಜನೆ ಸಿಗುವುದಿಲ್ಲಅಥವಾ ಪ್ರೀಮಿಯಂ ಹೆಚ್ಚಾಗುವುದು ಎಂದು ಭಾವಿಸಿ ಜನರು ತಮ್ಮ ಮೆಡಿಕಲ್ ಹಿಸ್ಟ್ರಿಯನ್ನು ಮರೆಮಾಡುತ್ತಾರೆ. ಇದು ನಂತರ ಕಂಡುಬಂದರೆ ವಿಮಾ ಕಂಪನಿಯು ನಿಮ್ಮ ಕ್ಲೇಮ್ ನ್ನು ನಿರಾಕರಿಸುತ್ತದೆ. ಕಂಪನಿಯು ಅಕ್ರಮ ಕ್ಲೇಮ್ ಗಾಗಿ ನಿಮ್ಮ ಮೇಲೆ ಮೊಕದ್ದಮೆ ಹೂಡಬಹುದು. ಈ ತಪ್ಪನ್ನು ಎಂದಿಗೂ ಮಾಡಬೇಡಿ.

5. ಕ್ಲೇಮ್ ಸೆಟ್ಟಲ್ ಮಾಡುವ ಪ್ರಕ್ರಿಯೆ

ವಿಮಾದಾರರ ಕ್ಲೇಮ್ ಸೆಟ್ಟಲ್ ಮಾಡುವ ಪ್ರಕ್ರಿಯೆಯನ್ನು ತಿಳಿದುಕೊಳ್ಳಿ. ಅನುಕೂಲಕರವಾಗಿ, ತ್ವರಿತವಾಗಿ ಮತ್ತು ಹೆಚ್ಚಿನ ಮಟ್ಟದ  ಕ್ಲೇಮ್ ಸೆಟ್ಟಲ್ ಮಾಡುವ ವಿಮೆಯನ್ನುಆರಿಸಿ. ವಿಮೆಗೆ ಕೂಡಿಸಿದ ಆಸ್ಪತ್ರೆಗಳ ಪಟ್ಟಿಯಲ್ಲಿ ನಿಮಗೆ ಒಪ್ಪುವ ಆಸ್ಪತ್ರ್ಯನ್ನು ಗುರುತಿಸಿಕೊಳ್ಳಿ. ಆಸ್ಪತ್ರೆ ದಾಖಲಿನ ಮುಂಚಿನ ಮತ್ತು ನಂತರದ ಚಿಕಿತ್ಸೆಗಳಿಗೆ ವಿಮೆಯು ಕೊಡುವ ಅನುಕೂಲಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ.

ಪಾಲಿಸಿಯನ್ನು ಖರೀದಿಸುವಾಗ ಮೇಲೆ ತಿಳಿಸಿದ ಅಂಶಗಳನ್ನು ನೆನಪಿನಲ್ಲಿಡಿ. ಇದು ಈಗ ಸಮಯ ತೆಗೆದುಕೊಳ್ಳಬಹುದು ಆದರೆ ನಿಮಗೆ ನಂತರ ಸಾಕಷ್ಟು ಸಮಯ, ಶ್ರಮ ಮತ್ತು ಹಣವನ್ನು ಉಳಿಸುತ್ತದೆ.

ಒನ್‌ಅಶ್ಯೂರ್ ಡಿಸ್ಟ್ರಿಬ್ಯೂಶನ್ ಪ್ಲಾಟ್ ಫಾರ್ಮ್ ಆಗಿದ್ದು, ಆರೋಗ್ಯ ಮತ್ತು ಹಣಕಾಸು ಒಗ್ಗೂಡುವ ವಿಷಯಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ವಿಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು oneassure.in ಗೆ ಭೇಟಿ ನೀಡಿ.

    Request for a free health insurance consultation

    Fields marked with an * are required


    Leave a Reply

    Your email address will not be published.