ನಿಮ್ಮ ಹೃದಯದ ಸಂರಕ್ಷಣೆ: ಹೃದಯ ರಕ್ಷಣಾ ವಿಮೆಯು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಹೇಗೆ ರಕ್ಷಿಸುತ್ತದೆ

ಹಾರ್ಟ್ ಅಟ್ಯಾಕ್, ಕಾರ್ಡಿಯಾಕ್ ಅರೆಸ್ಟ್, ಸ್ಟೋಕ್ ಇತ್ಯಾದಿಗಳು ಕುಟುಂಬದಲ್ಲಿ ಸಾವಿಗೆ ಕಾರಣವಾಗಬಹುದು ಅಥವಾ ಜನರನ್ನು ದೀರ್ಘಕಾಲದಲ್ಲಿ ಗಂಭೀರ ಸ್ಥಿತಿಗೆ ನೂಕಬಹುದು.

ಭಾರತದಲ್ಲಿ ನಾಲ್ಕು ಜನರಲ್ಲಿ ಒಬ್ಬರು ಹೃದಯ-ಸಂಬಂಧಿತ ಕಾಯಿಲೆಗಳಿಂದ ಮೃತರಾಗುತ್ತಾರೆ. ಹಾರ್ಟ್ ಅಟ್ಯಾಕ್, ಕಾರ್ಡಿಯಾಕ್ ಅರೆಸ್ಟ್, ಸ್ಟೋಕ್ ಇತ್ಯಾದಿಗಳು ಕುಟುಂಬದಲ್ಲಿ ಸಾವಿಗೆ ಕಾರಣವಾಗಬಹುದು ಅಥವಾ ಜನರನ್ನು ದೀರ್ಘಕಾಲದಲ್ಲಿ ಗಂಭೀರ ಸ್ಥಿತಿಗೆ ನೂಕಬಹುದು. ಅಂತಹ ಕಾಯಿಲೆಗಳಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳು ಕೇವಲ ಆಸ್ಪತ್ರೆ ದಾಖಲು ಖರ್ಚಿಗೆ ಸೀಮಿತವಾಗದೆ, ರೋಗಿಯ ಜೀವಿತಾವಧಿಯ ಆರೈಕೆಗೆ ವಿಸ್ತರಿಸಬಹುದು. ಅನೇಕ ಹೃದಯದ ಕಾಯಿಲೆಗಳು ಆನುವಂಶಿಕ (ಜೆನೆಟಿಕ್) ಆಗಿದ್ದು, ಕುಟುಂಬದ ಹಲವಾರು ಇದಕ್ಕೆ ಗುರಿಯಾಗಬಹುದು. ಆದರೆ ನೀವು ಆರೋಗ್ಯಕರ ಜೀವನಶೈಲಿ, ಮತ್ತು ಹೃದಯ ರಕ್ಷಣಾ ವಿಮಾ ಯೋಜನೆಯನ್ನು ಖರೀದಿಸುವುದರ ಮೂಲಕ ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ರಕ್ಷಿಸಬಹುದು.

ಭಾರತದ ಕೆಲವು ಹೃದಯ-ನಿರ್ದಿಷ್ಟ ಆರೋಗ್ಯ ವಿಮಾ ಯೋಜನೆಗಳು ನಿಮಗೆ ಹೇಗೆ ಸುರಕ್ಷತೆಯನ್ನು ನೀಡುತ್ತವೆ ಎಂಬುವುದನ್ನು ತಿಳಿದುಕೊಳ್ಳೋಣ.

ರೆಲಿಗೇರ್ ಹಾರ್ಟ್ ಮೆಡಿಕ್ಲೇಮ್

ರೆಲಿಗೇರ್ ಹಾರ್ಟ್ ಮೆಡಿಕ್ಲೇಮ್ ಅತ್ಯಂತ ವ್ಯಾಪಕವಾದ ಕವರೇಜ್(ರಕ್ಷಣೆ) ಒದಗಿಸುತ್ತದೆ ಮತ್ತು ನಿಮ್ಮ ಅಧಿಕತಮ ವೈದ್ಯಕೀಯ ವೆಚ್ಚಗಳನ್ನು ಪೂರೈಸುತ್ತದೆ.

  1. ಆಸ್ಪತ್ರೆ ದಾಖಲಿಗೆ ಹಾಗೂ ಡೇ ಕೇರ್ ಖರ್ಚುಗಳಿಗೆ ವಿಮೆಯ ಮೊತ್ತದಷ್ಟು ಕವರೇಜ್ ನೀಡುತ್ತದೆ.
  2. OPD ಖರ್ಚಿಗೆ ರೂ. 25,000 ರಷ್ಟು ಕವರೇಜ್ ನೀಡುತ್ತದೆ. ಅಂದರೆ ಔಷಧಿ, ರೋಗನಿರ್ಣಯ ಪರೀಕ್ಷೆ, ವೈದ್ಯರ ಸಮಾಲೋಚನೆ ಮುಂತಾದುವುಗಳ ಶುಲ್ಕ ಯೋಜನೆಯ ವ್ಯಾಪ್ತಿಗೆ ಬರುತ್ತದೆ.
  3. ಉತ್ತಮ ಆಂಬ್ಯುಲೆನ್ಸ್ ಕವರ್ (ಪ್ರತಿ ಬಾರಿಯ ಆಸ್ಪತ್ರೆ ದಾಖಲಿಗೆ ರೂ. 3,000 ವರೆಗೆ) ಹಾಗೂ ಆರ್ಗನ್ ಟ್ರಾನ್ಸ್ ಪ್ಲಾಂಟ್ ಗೆ ರೂ. 15 ಲಕ್ಷ ರಷ್ಟು ಕವರೇಜ್ ನೀಡುತ್ತದೆ.
  4. ಉತ್ತಮ  ನೋ ಕ್ಲೇಮ್ ಬೋನಸ್ ನೀತಿಯನ್ನು ಹೊಂದಿದ್ದು, ನಿಮ್ಮ ವಿಮೆಯ ಮೊತ್ತವನ್ನು ಮೊದಲ ವರ್ಷದಲ್ಲಿ 50% ಮತ್ತು ನಂತರ ಸತತವಾಗಿ, 2 ಮತ್ತು 3 ನೇ ವರ್ಷಗಳಲ್ಲಿ 25% ಹೆಚ್ಚಿಸುತ್ತದೆ.
  5. ICU ಶುಲ್ಕದ ಮೇಲೆ ಯಾವುದೇ ಮಿತಿಯಿಲ್ಲ, ಅಂದರೆ ರೋಗಿಯ ಅನಾರೋಗ್ಯ ಸ್ಥಿತಿಯಲ್ಲಿ ಆರ್ಥಿಕವಾಗಿ ಸಂಪೂರ್ಣ ರಕ್ಷಣೆಯನ್ನು ನೀಡುತ್ತದೆ.
  6. ಇದು ಲಿಪಿಡ್ ಪ್ರೊಫೈಲ್, ಫಾಸ್ಟಿಂಗ್, PP ಬ್ಲಡ್ ಶುಗರ್ ಮುಂತಾದ ಪರೀಕ್ಷೆಗಳಿಗೆ ವರ್ಷಕ್ಕೆ 3 ಬಾರಿ ಕವರೇಜ್ ಒದಗಿಸುತ್ತದೆ.
  7. ಮುಖ್ಯವಾಗಿ, ಚೇತರಿಕೆಗೆ ಸಲಹೆ ಪಡೆಯಲು ಮತ್ತು ತುರ್ತು ಅಗತ್ಯವಿದ್ದಲ್ಲಿ, ವೈದ್ಯರು ಆನ್‌ಲೈನ್ ಅಥವಾ ದೂರವಾಣಿಯ ಮೇಲೆ ಸಮಾಲೋಚನೆ ನಡೆಸಲು ಕವರೇಜ್ ಒದಗಿಸುತ್ತದೆ .
  8. ನೀವು ಆಸ್ಪತ್ರೆಗೆ ದಾಖಲಾದ ಪೂರ್ವದ 30 ದಿನಗಳು ಮತ್ತು ನಂತರದ 60 ದಿನಗಳು ಮಾಡಿದ ವೈದ್ಯಕೀಯ ವೆಚ್ಚಗಳನ್ನು ನೀಡುತ್ತದೆ, ಅಲ್ಲದೆ ಅಂತರರಾಷ್ಟ್ರೀಯ ಯಾವುದೇ ವೈದ್ಯರಿಂದ ಎರಡನೇ ಅಭಿಪ್ರಾಯವನ್ನು ಪಡೆಯಲು ಸಂಪೂರ್ಣ ವೆಚ್ಚವನ್ನು ನೀಡುತ್ತದೆ.

ಸ್ಟಾರ್ ಕಾರ್ಡಿಯಾಕ್ ಕೇರ್ ಇನ್ಶುರೆನ್ಸ್

ಸ್ಟಾರ್ ವಿಮಾದಾರರು ನಿಮಗೆ ಅನೇಕ ಉತ್ತಮ ಪ್ರಯೋಜನಗಳನ್ನು ನೀಡುವರು .

  1. ಇದರಲ್ಲಿ ಎರಡು ಯೋಜನೆಗಳಿವೆ – ಗೋಲ್ಡ್ ಮತ್ತು ಸಿಲ್ವರ್. ಸಿಲ್ವರ್ ಯೋಜನೆಯು, ಹೃದಯ ಸಂಬಂಧಿತ ಸಮಸ್ಯೆಗಳಿಗೆ ಸರ್ಜರಿ ಮಾಡಬೇಕಾದಲ್ಲಿ ಕವರೇಜ್ ನೀಡುತ್ತದೆ. ಗೋಲ್ಡ್ ಯೋಜನೆಯು ಹೃದಯ ಸಂಬಂಧಿತ ತೊಡಕುಗಳಿಗೆ ಬೇಕಾದ ಎಲ್ಲಾ ವೈದ್ಯಕೀಯ ವೆಚ್ಚಗಳಿಗೆ ಕವರೇಜ್ ನೀಡುತ್ತದೆ.
  2. ಈ ಯೋಜನೆಗಳು ಸುಮಾರು 400 ಡೇಕೇರ್ ಚಿಕಿತ್ಸೆಗಳನ್ನು ಒಳಗೊಂಡಿವೆ, ಮತ್ತು 10 ರಿಂದ 65 ವರ್ಷದವರೆಗಿನ ಎಲ್ಲರೂ ಇವುಗಳ ಅಡಿಯಲ್ಲಿ ರಕ್ಷಣೆ ಪಡೆಯಬಹುದು.
  3. ಈ ಯೋಜನೆಗಳು OPD ವೆಚ್ಚಗಳಿಗೆ,  ಪ್ರತಿ ಭೇಟಿಗೆ ರೂ. 500 ರಷ್ಟು ಮತ್ತು ಪ್ರತಿ ಪಾಲಿಸಿ ಅವಧಿಗೆ ರೂ. 1,500 ರಷ್ಟು ಕವರೇಜ್ ನೀಡುತ್ತದೆ.
  4. ಆಂಜಿಯೋಪ್ಲ್ಯಾಸ್ಟಿ ಅಥವಾ ಹೃದಯ ಸಂಬಂಧಿತ ಯಾವುದೇ ಸರ್ಜರಿಗೆ ಒಳಗಾದ ರೋಗಿಗಳಿಗೆ ಸರ್ಜರಿಯ 2-3 ವರ್ಷಗಳಲ್ಲಿ ವಿಮೆ ಪಡೆಯಲು ಅನುಮತಿಸುತ್ತದೆ.
  5. ವಿಮೆಯನ್ನು ಪಡೆಯಲು ವೈದ್ಯಕೀಯ ತಪಾಸಣೆಗಳ ಅಗತ್ಯವಿಲ್ಲ, ಆದರೆ ವಿಮೆ ಪಡೆಯಲು ಕ್ಲೈಂಟ್ ಹಿಂದಿನ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
  6. ಕ್ಯಾಟರಾಕ್ಟ್ ಆಪರೇಷನ್ ಗೆ, ನೀತಿಯ ಸಂಪೂರ್ಣ ಅವಧಿಯಲ್ಲಿ, ಗರಿಷ್ಠ ರೂ .30,000 ವರೆಗೆ ಕವರೇಜ್ ನೀಡುತ್ತದೆ.
  7. ಪ್ರತಿ ಆಸ್ಪತ್ರೆ ದಾಖಲು ಸಂದರ್ಭದಲ್ಲಿ, ಆಸ್ಪತ್ರೆಯಿಂದ ಬಿಡುಗಡೆಯಾದ ನಂತರದ ವೈದ್ಯಕೀಯ ವೆಚ್ಚವನ್ನು ರೂ. 5,000 ರಷ್ಟು, ಮತ್ತು ಆಸ್ಪತ್ರೆಗೆ ದಾಖಲಾದ ಮುಂಚಿನ 30 ದಿನಗಳ  ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಭರಿಸುತ್ತಾರೆ.
  8. ಆಸ್ಪತ್ರೆಗೆ ದಾಖಲಾದಾಗ ನೀಡುವ ಕವರೇಜ್  ಸರ್ಜನ್,ಅನೇಸ್ಥೆಟಿಸ್ಟ್, ಸಲಹೆಗಾರರು ಮತ್ತು ತಜ್ಞರ ಶುಲ್ಕಗಳು; ಹಾಗೂ ಆಕ್ಸಿಜನ್ ಸಿಲಿಂಡರ್‌ಗಳು, ಇಮೇಜಿಂಗ್ ಪರೀಕ್ಷೆಗಳು; ಮತ್ತು ಮುಖ್ಯವಾಗಿ ಔಷಧಿಗಳ ವೆಚ್ಚದಂತಹ ಹಲವಾರು ಸಂಬಂಧಿತ ವೆಚ್ಚಗಳನ್ನು ಒಳಗೊಂಡಿರುತ್ತದೆ.

ಮ್ಯಾಕ್ಸ್ ಬೂಪಾ ಹಾರ್ಟ್ ಬೀಟ್ ಯೋಜನೆ 

ಮ್ಯಾಕ್ಸ್ ಬೂಪಾ ಕೂಡ ಹಲವು ಸೂಕ್ತವಾದ ಹೃದಯ-ನಿರ್ದಿಷ್ಟ ವಿಮಾ ಯೋಜನೆಗಳನ್ನು ಒದಗಿಸುತ್ತದೆ. ಇದರಲ್ಲಿ ವ್ಯಕ್ತಿಗತ ಮತ್ತು ಕುಟುಂಬ ಯೋಜನೆಗಳಿವೆ. ಇವುಗಳ ಪ್ರಯೋಜನಗಳು ಹೀಗಿವೆ:

  1. ವಿಮೆಯ ಮೊತ್ತ ರೂ. 5 ಲಕ್ಷಕ್ಕಿಂತ ಹೆಚ್ಚಾಗಿದ್ದರೆ, ಆಸ್ಪತ್ರೆಗೆ ದಾಖಲಾದರೆ, ಯೋಜನೆಯು ನೀಡುವ ರೂಮ್ ಬಾಡಿಗೆಯ ಮೇಲೆ ಯಾವುದೇ ಮಿತಿಯಿಲ್ಲ.
  2. ನೀವು ಆಸ್ಪತ್ರೆಗೆ ದಾಖಲಾಗುವ ಮುಂಚಿನ 90 ದಿನಗಳಲ್ಲಿ, ಮತ್ತು ನೀವು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರದ 180 ದಿನಗಳವರೆಗೆ ಆಗುವ ವೈದ್ಯಕೀಯ ಖರ್ಚುಗಳನ್ನು ಪೂರೈಸುತ್ತದೆ. ಹೀಗೆ ನಿಮಗೆ ಚೇತರಿಸಿಕೊಳ್ಳಲು ದೀರ್ಘ ಅವಧಿಯನ್ನು ಒದಗಿಸುತ್ತದೆ.
  3. ಆಯ್ದ ನಗರಗಳಲ್ಲಿ, ನಿಮಗೆ ಮನಯಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಅಗತ್ಯವಾದಲ್ಲಿ ನೀವು ನರ್ಸಿಂಗ್, ಡಯಾಲಿಸಿಸ್, ಫಿಸಿಯೋಥೆರಪಿ ಮುಂತಾದ ಹಲವಾರು ಆರೋಗ್ಯ ಸೇವೆ ಮತ್ತು ಚಿಕಿತ್ಸೆಗಳನ್ನು ಮನೆಯಲ್ಲಿ ಪಡೆಯಬಹುದು.
  4. ಕ್ಲೇಮ್ ಮಾಡುವುದರ ಮೂಲಕ ನಿಮ್ಮ ಕವರೇಜ್ ಹಣ ದಣಿದಿದ್ದರೆ, ಅದನ್ನು ಸಂಪೂರ್ಣವಾಗಿ ಪುನಃಸ್ಥಾಪನೆ ಮಾಡಲಾಗುವುದು. ಆದರೆ ಅದನ್ನು ಅಸಂಬಂಧಿತ ರೋಗದ ಚಿಕಿತ್ಸೆಗೆ ಮಾತ್ರ ಬಳಸಬಹುದು.
  5. ಫ್ಯಾಮಿಲಿ ಫ್ಲೋಟರ್ ಯೋಜನೆಯು ಮೂರು ತಿಂಗಳ ಶಿಶುವಿಗೂ ಕವರೇಜ್ ಒದಗಿಸುತ್ತದೆ ಮತ್ತು ಗರಿಷ್ಠ 4 ಮಕ್ಕಳು ಮತ್ತು 2 ವಯಸ್ಕರಿಗೆ ಕವರೇಜ್ ನೀಡುತ್ತದೆ. ನಿಮ್ಮ ಕುಟುಂಬದಲ್ಲಿ ಅನೇಕರು ಹೃದಯದ ಕಾಯಿಲೆಗಳನ್ನು ಹೊಂದಿದ್ದರೆ ಇದು ನಿಮಗೆ ತಕ್ಕ ಯೋಜನೆ.

ಈ ಹೃದಯ-ನಿರ್ದಿಷ್ಟ ಯೋಜನೆಗಳಲ್ಲಿ ಒಂದನ್ನು ಆರಿಸಿ, ನೀವು ಅತ್ಯಂತ ಕಷ್ಟಕರ ಸಮಯದಲ್ಲೂ ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ಸಂರಕ್ಷಿಸಬಹುದು.

Photo by Walter Otto on Unsplash.

ಒನ್‌ಅಶ್ಯೂರ್ ಡಿಸ್ಟ್ರಿಬ್ಯೂಶನ್ ಪ್ಲಾಟ್ ಫಾರ್ಮ್ ಆಗಿದ್ದು, ಆರೋಗ್ಯ ಮತ್ತು ಹಣಕಾಸು ಒಗ್ಗೂಡುವ ವಿಷಯಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ವಿಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು oneassure.in ಗೆ ಭೇಟಿ ನೀಡಿ.

    Request for a free health insurance consultation

    Fields marked with an * are required


    Leave a Reply

    Your email address will not be published.