ಆರೋಗ್ಯ ವಿಮಾ ಏಜೆಂಟ್ ಆಗಿ ನಿಮ್ಮ ಸೋಶಿಯಲ್ ಮೀಡಿಯಾ ಉಪಸ್ಥಿತಿಯನ್ನು ಹೇಗೆ ವೃದ್ಧಿಸುವುದು

ಆರೋಗ್ಯ ವಿಮಾ ಏಜೆಂಟ್ ಆಗಿ ನೀವು ಸೋಶಿಯಲ್ ಮೀಡಿಯಾದಲ್ಲಿ ಇರುವುದು ಬಹಳ ಮುಖ್ಯ. ಏಕೆಂದರೆ ಇದು ಉಚಿತ ಮತ್ತು ಆಕರ್ಷಕ ಅಲ್ಲದೆ, ಹೊಸ ಗ್ರಾಹಕರನ್ನು ಪಡೆಯುವ ಉತ್ತಮ ವೇದಿಕೆ. ವಿಶಾಲವಾದ ಗ್ರಾಹಕರ ನೆಟ್‌ವರ್ಕ್‌ ರಚಿಸಲು ಇದು ಸೂಕ್ತ ಮಾಧ್ಯಮ.

2019 ರ ಕೊನೆಯಲ್ಲಿ, ಭಾರತದಲ್ಲಿ ಸೋಶಿಯಲ್ ಮೀಡಿಯಾ ಉಪಯೋಗಿಸುವವರ ಸಂಖ್ಯೆ 350 ದಶಲಕ್ಷ ಮುಟ್ಟಿತು. ಸರಾಸರಿ, ಭಾರತೀಯ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ 2.4 ಗಂಟೆಗಳ ಕಾಲ ಕಳೆಯುತ್ತಾರೆ ಮತ್ತು 290 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಸೋಶಿಯಲ್ ಮೀಡಿಯಾ ಬಳಕೆದಾರರು ಈ ಪ್ಲಾಟ್‌ಫಾರ್ಮ್‌ಗಳನ್ನು ಫೋನ್ ನಲ್ಲಿ ಬಳಸುತ್ತಾರೆ. ಇದರರ್ಥ, ಅತಿ ದೊಡ್ಡ ಜನಸಂಖ್ಯೆಗೆ ಸೋಶಿಯಲ್ ಮೀಡಿಯಾದ ಬಳಕೆ ತುಂಬಾ ಸುಲಭವಾಗಿದ್ದು, ಈ ಪ್ಲಾಟ್‌ಫಾರ್ಮ್‌ಗಳ ಮೂಲಕ ನೀವು ಅವರನ್ನು ತಲುಪಬಹುದು.

ಆರೋಗ್ಯ ವಿಮಾ ಏಜೆಂಟ್ ಆಗಿ ನೀವು ಸೋಶಿಯಲ್ ಮೀಡಿಯಾದಲ್ಲಿ ಇರುವುದು ಬಹಳ ಮುಖ್ಯ. ಏಕೆಂದರೆ ಇದು ಉಚಿತ ಮತ್ತು ಆಕರ್ಷಕ ಅಲ್ಲದೆ, ಹೊಸ ಗ್ರಾಹಕರನ್ನು ಪಡೆಯುವ ಉತ್ತಮ ವೇದಿಕೆ. ವಿಶಾಲವಾದ ಗ್ರಾಹಕರ ನೆಟ್‌ವರ್ಕ್‌ ರಚಿಸಲು ಇದು ಸೂಕ್ತ ಮಾಧ್ಯಮ. 

ಇದನ್ನು ಹೇಗೆ ಸಾಧಿಸುವುದು ಎಂದು ನೋಡೋಣ ಬನ್ನಿ. 

  1. ಈ ಕೆಲವು ಪ್ರಶ್ನೆಗಳನ್ನು ಮೊದಲು ಉತ್ತರಿಸಿ – ನಾನು ತಲುಪಬೇಕಾದ ಗ್ರಾಹಕರು ಯಾರು? ಅವರು ಯಾವ ವಯಸ್ಸಿನವರು? ಅವರ ಜೀವನಶೈಲಿಯು ಹೇಗಿರುತ್ತದೆ? ಆರೋಗ್ಯ ವಿಮೆಯ ಕುರಿತು ಅವರ ಅಪೇಕ್ಷೆಗಳೇನು? ಅವರು ವಿಮಾ ಏಜೆಂಟರನ್ನು ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ? ಅವರಿಗೆ ಆರೋಗ್ಯ ವಿಮೆ ಮುಖ್ಯದ ವಿಷಯವೇ? ಈ ಪ್ರಶ್ನೆಗಳು ನಿಮಗೆ ಗ್ರಾಹಕ ಪ್ರೊಫೈಲ್ ರಚಿಸಿ ಅವರೊಡನೆ ಸಂವಾದವನ್ನು ನಡೆಸಲು ಸಹಾಯ ಮಾಡುತ್ತವೆ. ಉದಾಹರಣೆಗೆ, ನಿಮ್ಮ ಗ್ರಾಹಕರು ಹಿರಿಯ ನಾಗರಿಕರಾಗಿದ್ದರೆ, ಅವರ ಸಮಸ್ಯೆಗಳನ್ನು ಪರಹರಿಸುವ ದೃಷಿಯಲ್ಲಿ ಎಲ್ಲಾ ಸಂಪರ್ಕವನ್ನು ನಡೆಸಬೇಕು. ಕಿರಿಯ ಗ್ರಾಹಕರಿಗೆ ಹೋಲಿಸಿದಾಗ; ನೀವು ಸಂವಾದ ಮಾಡುವ ವಿಧಾನ, ನೀವು ವಿವರಿಸುವ ಯೋಜನೆಗಳು ಮತ್ತು ನೀವು ಪ್ರಾಧಾನ್ಯ ಕೊಡುವ ಅಂಶಗಳು ವಿಭಿನ್ನವಾಗಿರುತ್ತವೆ.
  1. ನಿಮ್ಮ ಪ್ರೊಫೈಲ್ – ನಿಮ್ಮ ಸೋಶಿಯಲ್ ಮೀಡಿಯಾ ಪ್ರೊಫೈಲ್ ನಲ್ಲಿ ಮುಖ್ಯವಾದ ಎಲ್ಲ ಮಾಹಿತಿ ಇರಬೇಕು – ವೆಬ್‌ಸೈಟ್ ವಿಳಾಸ, ಇಮೇಲ್-ವಿಳಾಸ, ಸಂಪರ್ಕ ಮಾಹಿತಿ, ನಿಮ್ಮ ಮತ್ತು ನಿಮ್ಮ ವ್ಯವಹಾರದ ಬಗ್ಗೆ ಮಾಹಿತಿ, ಮುಂತಾದುವುಗಳು. ನೀವು ಒದಗಿಸುವ ಸೂಕ್ತವಾದ ಮಾಹಿತಿಯಿಂದ, ನಿಮ್ಮ ಗ್ರಾಹಕರು ನಿಮ್ಮನ್ನು ಚೆನ್ನಾಗಿ ತಿಳಿದುಕೊಳ್ಳಬಹುದು.
  1. ವಾಟ್ಸಾಪ್ ಅನ್ನು ಬಳಸಿ – ಉದ್ಯಮಿಗಳಿಗೆ ತಮ್ಮ ಗ್ರಾಹಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು, ವಾಟ್ಸಾಪ್ ಬಿಸಿನೆಸ್ ಅಕೌಂಟ್ ಒದಗಿಸುತ್ತದೆ. ಇದು ಉಚಿತವಾಗಿದ್ದು ಉತ್ತಮ ವ್ಯಾಪ್ತಿಯನ್ನು ಹೊಂದಿರುತ್ತದೆ. ಜನರು ಸಾಮಾನ್ಯವಾಗಿ ತಮ್ಮ ಮೇಲ್‌ಗಳನ್ನು ಓದುವುದಿಲ್ಲ ಮತ್ತು ನಿಮ್ಮ ಕರೆಗಳನ್ನು ಸ್ವೀಕರಿಸುವುದಿಲ್ಲ, ಆದರೆ ಆಗಾಗ್ಗೆ ತಮ್ಮ ವಾಟ್ಸಾಪ್ ಮೆಸೇಜ್ ಗಳನ್ನು ಓದುತ್ತಾರೆ. ಯೋಜನೆಗಳನ್ನು ಪಟ್ಟಿಮಾಡಲು, ಅವುಗಳ ಬಗ್ಗೆ ಸಣ್ಣ ವಿವರಣೆಯನ್ನು ಬರೆಯಲು ಮತ್ತು ನಿಮ್ಮ ಗ್ರಾಹಕರಿಗೆ ಬ್ರೌಸ್ ಮಾಡಲು ಅವುಗಳನ್ನು ಸರಳ ರೀತಿಯಲ್ಲಿ ಸಂಘಟಿಸಲು ಈ ಖಾತೆಯ ಕ್ಯಾಟಲಾಗ್ ಫೀಚರ್ ನ್ನು ನೀವು ಬಳಸಬಹುದು. 

ಇದು ಬಿಸಿನೆಸ್ ಪ್ರೊಫೈಲ್ ಫೀಚರ್ ಕೂಡ ಹೊಂದಿದೆ, ಇಲ್ಲಿ ಗ್ರಾಹಕರು ನಿಮ್ಮ ಇಮೇಲ್ ವಿಳಾಸ, ವ್ಯವಹಾರ ವಿವರಣೆ, ವೆಬ್‌ಸೈಟ್ ಮಾಹಿತಿ ಮುಂತಾದುವುಗಳನ್ನು ಸುಲಭವಾಗಿ ನೋಡಬಹುದು. ನಿಮ್ಮ ಅಗತ್ಯಗಳನ್ನು ಆಧರಿಸಿ, ಗ್ರಾಹಕರನ್ನು ‘ಸಂಭಾವ್ಯ ಗ್ರಾಹಕ’, ‘ಹಿರಿಯ ಗ್ರಾಹಕ’, ‘ಹೊಸ ಗ್ರಾಹಕ’ ಮುಂತಾದ ಗುರುತು ಪಟ್ಟಿಗಳೊಂದಿಗೆ, ಸಂಘಟಿಸಬಹುದು. ಇದು ಆಟೋಮೇಟೆಡ್ ರಿಪ್ಲೈ ಫೀಚರ್ ಹೊಂದಿದ್ದು, ನೀವು ಲಭ್ಯವಿಲ್ಲದಿದ್ದಾಗ ನಿಮ್ಮ ಗ್ರಾಹಕರ ಮೆಸೇಜ್ ಗೆ ಪೂರ್ವಸಿದ್ಧ ಸಂದೇಶವನ್ನು ಕಳುಹಿಸಬಹುದು. ಬಹು ಮುಖ್ಯವಾಗಿ, ನಿಮ್ಮ ಗ್ರಾಹಕರೊಂದಿಗೆ ವೈಯಕ್ತಿಕ ಸಂಪರ್ಕದ ಮೂಲಕ ನಂಬಿಕೆಯನ್ನು ಸ್ಥಾಪಿಸಲು, ಮತ್ತು ನಿಮ್ಮ ಗ್ರಾಹಕ ನೆಟ್ವರ್ಕ್ ವೃದ್ಧಿಸಲು ವಾಟ್ಸಾಪ್ ಸಹಾಯ ಮಾಡುತ್ತದೆ.

  1. ರಚಿಸಿ ಅಥವಾ ಕ್ಯುರೇಟ್ ಮಾಡಿ – ನಿಮ್ಮ ಪ್ರೇಕ್ಷಕರನ್ನು ತೊಡಗಿಸಲು ನಿಮಗೆ ಸರಳ ಮತ್ತು ಸೂಕ್ತ ಲೇಖನದ ವಿಷಯಗಳು ಬೇಕಾಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ, ನಿಮ್ಮ ಬರಹ ಶೈಕ್ಷಣಿಕ, ಮಾಹಿತಿ ನೀಡುವ, ಮಾರ್ಕೆಟಿಂಗ್ ಮತ್ತು ಸಾಮಾನ್ಯ ಪ್ರಶ್ನೆಗಳ ಉತ್ತರ ನೀಡುವ ಲೇಖನಗಳ ಮಿಶ್ರಣವಾಗಿರಬೇಕು. ಕೇವಲ ಯೋಜನೆಗಳನ್ನು ತಳ್ಳುವುದು ದೀರ್ಘಾವಧಿಯಲ್ಲಿ ನಿಮಗೆ ಸಹಾಯ ಮಾಡುವುದಿಲ್ಲ.ಹೀಗೆ ಮಾಡುವುದರಿಂದ ನಿಮ್ಮ ಯೋಜನೆಗಳನ್ನು ಈಗಾಗಲೇ ಖರೀದಿಸಿದ ಜನರು ನಿಮ್ಮನ್ನು ಫಾಲೋ ಮಾಡುವುದಿಲ್ಲ. 

ಲೇಖನಗಳನ್ನು ತಯಾರು ಮಾಡುವ ಎರಡು ಮಾರ್ಗಗಳಿವೆ, ಕ್ಯುರೇಟ್ ಮಾಡುವುದು ಮತ್ತು ಸೃಷ್ಟಿಸುವುದು. ನೀವು ವಿಭಿನ್ನ ಮೂಲಗಳಿಂದ ವಿಷಯಗಳನ್ನು ಸಂಗ್ರಹಿಸಿ, ನಿಮ್ಮ ಪ್ರೇಕ್ಷಕರಿಗೆಂದು ಲೀಖನವನ್ನು ಸಿದ್ಧ ಮಾಡಬಹುದು. ಒನ್ ಅಶ್ಯೂರ್ ಲೇಖನಗಳನ್ನು ಸೃಷ್ಟಿಸುತ್ತದೆ, ಮತ್ತು ಅವುಗಳನ್ನು ಸಂಬಂಧಿತ ಚಿತ್ರಗಳೊಂದಿಗೆ ತಮ್ಮ ಪಾರ್ಟ್ನರ್ ಗಳಿಗೆ ಒದಗಿಸುತ್ತದೆ. ಪಾರ್ಟ್ನರ್ ಗಳು ಈ ಸಂಪನ್ಮೂಲಗಳನ್ನು ಸ್ವತಃ ಕಲಿಯಲು, ತಮ್ಮ ಗ್ರಾಹಕರಿಗೆ ಶಿಕ್ಷಣೆ ನೀಡಲು ಮತ್ತು ಹೊಸ ಅವಕಾಶಗಳನ್ನು ಹುಡುಕಲು ಉಪಯೋಗಿಸಬಹುದು; ಅಲ್ಲದೆ ತಮ್ಮ ಗ್ರಾಹಕರಿಗೂ ಇವುಗಳನ್ನು ಒದಗಿಸಬಹುದು. ನೀವು ನಿಮ್ಮ ಗ್ರಾಹಕರ ಅಗತ್ಯಗಳನ್ನು ಆಧರಿಸಿ ನಿಮ್ಮ ಸ್ವಂತ ಲೇಖನಗಳನ್ನು ರಚಿಸಬಹುದು.

  1. ಸುಸಂಗತವಾಗಿರಿ ಮತ್ತು ಸಂವಾದ ನಡೆಸಿ – ನಿಯಮಿತವಾಗಿ ಲೇಖನಗಳನ್ನು ಪ್ರೇಕ್ಷಕರೊಂದಿಗೆ ಶೇರ್ ಮಾಡಿ. ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನ ಸೀಮಿತವಾಗಿರುತ್ತದೆ; ನೀವು ನಿಷ್ಕ್ರೀಯರಾದರೆ ಜನರು ನಿಮ್ಮನ್ನು ಮರೆಯಬಹುದು. ಇದಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಮಾತನಾಡಿಸುವ ಜನರಿಗೆ ಪ್ರತಿಕ್ರಿಯಿಸಿ. ನಿಮ್ಮ ವೈಯಕ್ತಿಕ ಸಂವಾದವು ಜನರ ವಿಶ್ವಾಸವನ್ನು ಗಳಿಸುತ್ತದೆ, ಮತ್ತು ನೀವು ತಮ್ಮ ಪ್ರೇಕ್ಷಕ ಸಮುದಾಯವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಈ ಸಮುದಾಯದಲ್ಲಿ ನಿಮಗೆ ಹೊಸ ಗ್ರಾಹಕರು ಸಿಗುವರು.
  1. ಜನರ ಪ್ರತಿಕ್ರಿಯೆಯನ್ನು ಆಲಿಸಿ  – ಜನರು ಯಾವ ರೀತಿಯ ಲೇಖನಗಳನ್ನು ಹೆಚ್ಚು ಓದುತ್ತಾರೆ, ಅವರು ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ, ನಿಮ್ಮ ಯೋಜನಾ ನಿರ್ದಿಷ್ಟ ಪೋಸ್ಟ್‌ಗಳಿಗೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ, ಇತ್ಯಾದಿಗಳ ಬಗ್ಗೆ ನಿಗಾ ಇರಿಸಿ. ಈ ಸಣ್ಣ ವಿವರಗಳು ನಿಮ್ಮ ಸಂದೇಶವನ್ನು ತೀಕ್ಷ್ಣಗೊಳಿಸಲು ಮತ್ತು ನಿಮ್ಮ ಪ್ರೇಕ್ಷಕ ಸಮುದಾಯ ಬೆಳೆಸಲು ಸಹಾಯ ಮಾಡುತ್ತದೆ.
  1. ಪ್ರಯೋಗ ಮಾಡಿ – ನೀವು ವ್ಯವಹಾರ ನಡೆಸಲು ಉದ್ದೇಶಿಸಿದರೂ, ಯಾವಾಗಲೂ ಗಂಭೀರ ಸ್ವರಗಳಲ್ಲಿ ಸಂವಾದ ನಡೆಸುವುದು ಅನಿವಾರ್ಯವಲ್ಲ. ನಿಮ್ಮ ಲೇಖನ, ಪೋಸ್ಟ್‌ಗಳು ಮತ್ತು ಸಂವಹನಗಳು ಸಂಭಾಷಣೆಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿರಬೇಕು. ನೀವು ಹಾಸ್ಯಮಯವಾಗಿ, ಜಾಣತನದಿಂದ ಸಂವಾದ ನಡೆಸಬಹುದು. ತಾವು ವ್ಯವಹಾರ ಘಟಕದೊಂದಿಗೆ ಅಲ್ಲದೆ, ಒಬ್ಬ ವ್ಯಕ್ತಿಯೊಂದಿಗೆ ಸಂಭಾಷಿಸುತ್ತಿರುವ ಅರಿವು ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ.

ಮೇಲಿನ ಹಂತಗಳನ್ನು ಅನುಸರಿಸಿ  ತಮ್ಮ ಸೋಶಿಯಲ್ ಮೀಡಿಯಾ ಉಪಸ್ಥಿತಿಯನ್ನು ವೃದ್ಧಿಗೊಳಿಸಬಹುದು; ನಿಮ್ಮ ವ್ಯವಹಾರವನ್ನು ಬೆಳೆಸುಬಹುದು. ನೆನಪಿನಲ್ಲಿಡಿ, ಸೋಶಿಯಲ್ ಮೆಡಿಯಾದಲ್ಲಿ ಯಶಸ್ವಿಯಾಗಲು ಸಂಭಾಷಣೆಯೇ ಮಾರ್ಗ.

Image by Hilary Clark from Pixabay.

ಒನ್‌ಅಶ್ಯೂರ್ ಡಿಸ್ಟ್ರಿಬ್ಯೂಶನ್ ಪ್ಲಾಟ್ ಫಾರ್ಮ್ ಆಗಿದ್ದು, ಆರೋಗ್ಯ ಮತ್ತು ಹಣಕಾಸು ಒಗ್ಗೂಡುವ ವಿಷಯಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ವಿಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು oneassure.in ಗೆ ಭೇಟಿ ನೀಡಿ.

    Request for a free health insurance consultation

    Fields marked with an * are required


    Leave a Reply

    Your email address will not be published.