ಮ್ಯಾಕ್ಸ್ ಬುಪಾ ಹೆಲ್ತ್ ಕಂಪ್ಯಾನಿಯನ್ ಅಥವಾ ಎಚ್‌ಡಿಎಫ್‌ಸಿ ಸುರಕ್ಷಾ; ಯಾವ ಆರೋಗ್ಯ ವಿಮೆಯನ್ನು ಖರೀದಿಸುವುದು ಉಚಿತ?

ನಿಮ್ಮ ಕುಟುಂಬಕ್ಕೆ ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವುದು ಕಠಿಣ ಕೆಲಸ. ವಿಶೇಷವಾಗಿ, ಮೊದಲ ಬಾರಿ ಖರೀದಿಸುವವರನ್ನು ಇದು ಗಲಿಬಿಲಿ ಮಾಡುವುದು.

ನಿಮ್ಮ ಕುಟುಂಬಕ್ಕೆ ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವುದು ಕಠಿಣ ಕೆಲಸ. ವಿಶೇಷವಾಗಿ, ಮೊದಲ ಬಾರಿ ಖರೀದಿಸುವವರನ್ನು ಇದು ಗಲಿಬಿಲಿ ಮಾಡುವುದು. ತಾಂತ್ರಿಕ ಪದಗಳನ್ನು ತಿಳಿದುಕೊಳ್ಳದಿರುವುದು, ಪ್ರೀಮಿಯಂ ಅನ್ನು ತಪ್ಪಾಗಿ ಲೆಕ್ಕಾಚಾರ ಮಾಡುವುದು ಮತ್ತು ಮಹತ್ವದ ಅಂಶಗಳನ್ನು ನಿರ್ಲಕ್ಷಿಸುವುದು ನಾವೆಲ್ಲರೂ ಮಾಡುವ ಸಾಮಾನ್ಯ ತಪ್ಪುಗಳು. ಕಡಿಮೆ ಪ್ರೀಮಿಯಂ ದರಕ್ಕೆ ಎಕ್ಕಸೆಕ್ಕ ನೀತಿಯನ್ನು ಖರೀದಿಸಿದರೆ, ಅದು ನಿಮಗೆ ಅಗತ್ಯವಿರುವ ಸಮಯದಲ್ಲಿ ನೆರವಿಗೆ ಬರುವುದಿಲ್ಲ.

ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಉತ್ತಮ ವಿಮಾದಾರರಿಂದ, ನಿಮಗೆ ತಕ್ಕ ಯೋಜನೆಯನ್ನು ಆಯ್ದುಕೊಳ್ಳಬಹುದು. ಪ್ರತಿಯೊಬ್ಬರ  ಅಗತ್ಯಗಳು ಮತ್ತು ಆದ್ಯತೆಗಳು ಭಿನ್ನವಾಗಿರುವುದರಿಂದ, ಖರೀದಿಸುವ  ಮುನ್ನ ಯೋಜನೆಗಳನ್ನು ಹೋಲಿಸುವುದು ಒಳ್ಳೆಯದು. ನಮ್ಮ ಹಿಂದಿನ ಲೇಖನಗಳಲ್ಲಿ, ನಾವು ಸ್ಟಾರ್ ಕಾಂಪ್ರಹೆನ್ಸಿವ್ ಅನ್ನು ಎಬಿಹೆಚ್ಐ ಆಕ್ಟಿವ್ ಅಶೂರ್ ಡೈಮಂಡ್‌ನೊಂದಿಗೆ; ಮತ್ತು ಐಸಿಐಸಿಐ ಐಹೆಲ್ತ್‌ ಅನ್ನು ಗೋಡಿಜಿಟ್ ಹೆಲ್ತ್‌ಕೇರ್ ಯೋಜನೆಯೊಂದಿಗೆ ಹೋಲಿಸಿದ್ದೇವೆ. ಈ ಲೇಖನದಲ್ಲಿ, ಮ್ಯಾಕ್ಸ್ ಬುಪಾ ಹೆಲ್ತ್ ಕಂಪ್ಯಾನಿಯನ್ ಮತ್ತು ಎಚ್‌ಡಿಎಫ್‌ಸಿ ಸುರಕ್ಷಾ ಪರಸ್ಪರ ಹೇಗೆ ಭಿನ್ನವಾಗಿವೆ ಎಂಬುದನ್ನು ನೋಡೋಣ.

ಮೊದಲು ಇವೆರಡರ ಸಾಮಾನ್ಯ ಅಂಶಗಳನ್ನು ಗಮನಿಸೋಣ. ಎರಡೂ ಯೋಜನೆಗಳು ಐಸಿಯು, ಡೇ ಕೇರ್ ಕಾರ್ಯವಿಧಾನಗಳು, ಡೊಮಿಸಿಲರಿ ಚಿಕಿತ್ಸೆಗಳು ಮತ್ತು 24 ಗಂಟೆಗಳಿಗಿಂತ ಹೆಚ್ಚಿನ ಆಸ್ಪತ್ರೆ ದಾಖಲಿನ ಎಲ್ಲಾ ವೆಚ್ಚಗಳನ್ನು ಪೂರೈಸುತ್ತವೆ. ಇವೆರಡೂ ಆಯುಷ್ ಸಂಬಂಧಿತ ಚಿಕಿತ್ಸೆಗಳ ವೆಚ್ಚಗಳನ್ನು ನೀಡುತ್ತವೆ; ಮತ್ತು 30 ದಿನಗಳ ಆರಂಭಿಕ ಕಾಯುವ ಅವಧಿ, 24 ತಿಂಗಳುಗಳ ನಿರ್ದಿಷ್ಟ ಕಾಯುವ ಅವಧಿ ಮತ್ತು ಮೊದಲೇ ಅಸ್ತಿತ್ವದಲ್ಲಿರುವ (ಪ್ರಿ-ಎಕ್ಸಿಸ್ಟಿಂಗ್) ಕಾಯಿಲೆಗಳಿಗೆ 36 ತಿಂಗಳುಗಳ ಕಾಯುವ ಅವಧಿಯನ್ನು ಹೊಂದಿವೆ.

ಆದರೆ, ಇವೆರಡರ ನಡುವೆ ಹಲವಾರು ಗಮನಾರ್ಹ ವ್ಯತ್ಯಾಸಗಳಿವೆ, ಅವುಗಳನ್ನು ನಾವು ಕೆಳಗೆ ಪಟ್ಟಿ ಮಾಡಿದ್ದೇವೆ.

Image by Robin Higgins from Pixabay.

ಒನ್‌ಅಶ್ಯೂರ್ ಡಿಸ್ಟ್ರಿಬ್ಯೂಶನ್ ಪ್ಲಾಟ್ ಫಾರ್ಮ್ ಆಗಿದ್ದು, ಆರೋಗ್ಯ ಮತ್ತು ಹಣಕಾಸು ಒಗ್ಗೂಡುವ ವಿಷಯಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ವಿಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು oneassure.in ಗೆ ಭೇಟಿ ನೀಡಿ.

    Request for a free health insurance consultation

    Fields marked with an * are required


    Leave a Reply

    Your email address will not be published.