ಚಿಕ್ಕ ವಯಸ್ಸಿನಲ್ಲಿ ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವ ಏಳು ಪ್ರಯೋಜನಗಳು

ಆರೋಗ್ಯ ವಿಮೆಯು ನೀವು ನಿಮ್ಮ ಭವಿಷ್ಯಕ್ಕಾಗಿ ಮಾಡುವ ಹೂಡಿಕೆ. ಚಿಕ್ಕ ವಯಸ್ಸಿನಲ್ಲಿ ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡುವುದು ಭವಿಷ್ಯದಲ್ಲಿ ಲಾಭದಾಯಕವಾಗುವುದು

ಆರೋಗ್ಯ ವಿಮೆಯು ನೀವು ನಿಮ್ಮ ಭವಿಷ್ಯಕ್ಕಾಗಿ ಮಾಡುವ ಹೂಡಿಕೆ. ಇದನ್ನು ತ್ವರಿತವಾಗಿ ಖರೀದಿಸುವುದು ಉತ್ತಮ. ಚಿಕ್ಕ ವಯಸ್ಸಿನಲ್ಲಿ ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡುವುದು ಭವಿಷ್ಯದಲ್ಲಿ ಲಾಭದಾಯಕವಾಗುವುದು. ಇದರ ಕೆಲವು ಪ್ರಯೋಜನಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.

1. ಕಡಿಮೆ ಪ್ರೀಮಿಯಂ

ಅಪಾಯದ ಮೌಲ್ಯಮಾಪನದ ಆಧಾರದ ಮೇಲೆ ವಿಮೆಯನ್ನು ನೀಡಲಾಗುತ್ತದೆ. ನೀವು ಕಿರಿಯ ವಯಸ್ಸಿನಲ್ಲಿ, ಆರೋಗ್ಯಕರವಾಗಿದ್ದಾಗ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ‘ವಿಮೆ ಮೊತ್ತವನ್ನು’ ಪಡೆಯಬಹುದು. ಏಕೆಂದರೆ, ಈ ವಯಸ್ಸಿನಲ್ಲಿ ನೀವು ಅನಾರೋಗ್ಯಕ್ಕೆ ಒಳಗಾಗುವ ಮತ್ತು ಹೆಚ್ಚಿನ ವೈದ್ಯಕೀಯ ವೆಚ್ಚವನ್ನು ಕ್ಲೇಮ್ ಮಾಡುವ ಸಾಧ್ಯತೆಗಳು ಕಡಿಮೆ. ನೀವು ವಿಮಾದಾರರಿಗೆ ‘ಲೊ-ರಿಸ್ಕ್’  ಕ್ಲೈಂಟ್ ಆಗಿದ್ದು, ನಿಮಗೆ ಉತ್ತಮ ವ್ಯಾಪ್ತಿಯನ್ನು ಒದಗಿಸಲು ಅವರು ಕಡಿಮೆ ಶುಲ್ಕ ವಿಧಿಸುತ್ತಾರೆ.

2. ಕಾಯುವ ಅವಧಿ (ವೈಟಿಂಗ್ ಪೀರಿಯಡ್)

ಕ್ಯಾಟರಾಕ್ಟ್, ಹೃದಯದ ರೋಗ, ಡಯಾಬಿಟೀಸ್ ಮುಂತಾದ ಕೆಲವು ಕಾಯಿಲೆಗಳಿಗೆ 2-4 ವರ್ಷಗಳ ಕಾಯುವ ಅವಧಿ ಇರುತ್ತದೆ. ನೀವು ಮೊದಲೇ ವಿಮೆಯನ್ನು ಖರೀದಿಸಿದರೆ, ಕಠಿಣ ವೈದ್ಯಕೀಯ ಸ್ಥಿತಿಯನ್ನು ಎದುರಿಸುವ ಹೊತ್ತಿಗೆ ಕಾಯುವ ಅವಧಿಯನ್ನು ದಾಟಿರುವಿರಿ.

3. ವ್ಯಾಪಕ ವ್ಯಾಪ್ತಿ

ಚಿಕ್ಕ ವಯಸ್ಸಿನಲ್ಲಿ ನೀವು ವ್ಯಾಪಕ ಶ್ರೇಣಿಯ ಯೋಜನೆಗಳಿಂದ, ವ್ಯಾಪಕ ವ್ಯಾಪ್ತಿಯನ್ನು ಒದಗಿಸುವ ಯೋಜನೆಯನ್ನು ಖರೀದಿಸಬಹುದು. ನಿಮಗೆ ವಯಸ್ಸಾದಂತೆ ಆರೋಗ್ಯದ ಅಪಾಯಗಳು ಹೆಚ್ಚಾಗಿ,  ವಿಮಾದಾರರು ನಿಮಗೆ ಲಭ್ಯವಿರುವ ಆಯ್ಕೆಗಳನ್ನು ಕಡಿಮೆ ಮಾಡುವರು. ಇದರರ್ಥ, ಮೊದಲೇ ಖರೀದಿಸಿದರೆ ನೀವು ಹೆಚ್ಚಿನ ಆಯ್ಕೆಗಳು, ವ್ಯಾಪಕ ವ್ಯಾಪ್ತಿ, ಉತ್ತಮ ವ್ಯವಹಾರಗಳನ್ನು ಕಡಿಮೆ ಬೆಲೆಗೆ  ಪಡೆಯುವಿರಿ. ವಯಸ್ಸಾದಂತೆ, ನೀವು ಹೆಚ್ಚಿನ ಕಾಯಿಲೆಗಳಿಗೆ ಗುರಿಯಾಗುವುದರಿಂದ ವಿಮಾದಾರರು, ಅವರು ಒದಗಿಸುವ ಕವರ್ ಅನ್ನು ಕಿರಿದಾಗಿಸುತ್ತಾರೆ.

4. ಬೋನಸ್

ಹೆಚ್ಚಿನ ವಿಮಾ ಕಂಪನಿಗಳು ಪ್ರತಿ ಕ್ಲೇಮ್-ಮುಕ್ತ ವರ್ಷಕ್ಕೆ ಬೋನಸ್ ಅನ್ನು ಒದಗಿಸುತ್ತವೆ. ನೀವು ನಿಮ್ಮ ವಿಮೆಯ ಮೊತ್ತದ 100% ರಷ್ಟು ಬೋನಸ್ ಅನ್ನು ಸಂಗ್ರಹಿಸಬಹುದು. ನೀವು ಚಿಕ್ಕವರಿದ್ದಾಗ ವಿಮೆಯನ್ನು ಖರೀದಿಸಿದರೆ, ಹಲವಾರು ಕ್ಲೇಮ್-ಮುಕ್ತ ವರ್ಷಗಳ ಬೋನಸ್ ಅನ್ನು ಸೇರಿಸಿಕೊಳ್ಳಬಹುದು; ಮತ್ತು ನಿಮಗೆ ವಿಮೆಯ ಮೊತ್ತದ ಅಗತ್ಯವಾಗುವವರೆಗೆ ನಿಮ್ಮ ಕವರ್ ಅನ್ನು ಗಣನೀಯವಾಗಿ ಹೆಚ್ಚಿಸಬಹುದು. 

5. ಕಡಿಮೆ ನಿರಾಕರಣೆ

ನಿವು ‘ಹೈ-ರಿಸ್ಕ್’ ಶ್ರೇಣಿಯ ಕ್ಲೈಂಟ್ ಎಂದು ನಿರ್ಧರಿಸಿದರೆ, ವಿಮಾ ಕಂಪನಿಗಳು ನಿಮ್ಮ ವಿಮೆಯ ಅರ್ಜಿಯನ್ನು ತಿರಸ್ಕರಿಸಬಹುದು ಅಥವಾ ಹೆಚ್ಚಿನ ಪ್ರೀಮಿಯಂ ದರವನ್ನು ವಿಧಿಸಬಹುದು. ನೀವು ಯುವಕರಾಗಿ, ಆರೋಗ್ಯಕರವಾಗಿದ್ದಾಗ ನಿಮ್ಮ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಬಹುತೇಕ ಶೂನ್ಯವಾಗಿರುತ್ತದೆ. ಆದ್ದರಿಂದ ಸಣ್ಣ ವಯಸ್ಸಿನಲ್ಲಿ ಅರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡುವುದು ಉತ್ತಮ.

6. ಗ್ರಾಹಕೀಕರಣ(ಕಸ್ಟಮೈಸೇಷನ್)

ಪಾಲಿಸಿಯನ್ನು ಮೊದಲೇ ಖರೀದಿಸಿದರೆ, ನೀವು ಸಮಯ ಮತ್ತು ಅಗತ್ಯಗಳ ಪ್ರಕಾರ ಯೋಜನೆಯನ್ನು ಕಡಿಮೆ ವೆಚ್ಚದಲ್ಲಿ ಗ್ರಾಹಕೀಯಗೊಳಿಸಬಹುದು. ಉದಾಹರಣೆಗೆ: ನಿಮ್ಮ ಕುಟುಂಬದಲ್ಲಿ ಡಯಾಬಿಟೀಸ್ ಕಾಯಿಲೆಯ ಪ್ರಚಲನೆ ಇದ್ದರೆ, ನೀವು ಮೂಲ ಯೋಜನೆಯನ್ನು ಕಡಿಮೆ ವೆಚ್ಚದಲ್ಲಿ ಖರೀದಿಸಿ (30 ನೇ ವಯಸ್ಸಿನಲ್ಲಿ) ಅದನ್ನು ನವೀಕರಿಸುತ್ತಿರಬಹುದು. ಅಗತ್ಯವಿದ್ದರೆ ನೀವು ನಂತರ ಆ ಯೋಜನೆಗೆ ಟಾಪ್-ಅಪ್‌ಗಳನ್ನು ಸೇರಿಸಬಹುದು ಮತ್ತು ವಯಸ್ಸಾದಂತೆ ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ತಕ್ಕಂತೆ ಅವುಗಳನ್ನು ಕಸ್ಟಮೈಸ್ ಮಾಡಬಹುದು.

7. ಆರ್ಥಿಕ ಪ್ಲಾನಿಂಗ್

ಆರೋಗ್ಯ ವಿಮೆ ನಿಮಗೆ ತೆರಿಗೆ ಪ್ರಯೋಜನ (ಟ್ಯಾಕ್ಸ್ ಬೆನಿಫಿಟ್) ಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಮುಂಚಿತವಾಗಿ ಹೂಡಿಕೆ ಮಾಡಿದರೆ ವರ್ಷವರ್ಷ ಟ್ಯಾಕ್ಸ್ ಉಳಿಸುವುದಲ್ಲದೆ, ನಿಮ್ಮ ಭವಿಷ್ಯವನ್ನು ದೀರ್ಘಾವಧಿಯಲ್ಲಿ ಭದ್ರಪಡಿಸುತ್ತದೆ. ಮೂಲಭೂತವಾಗಿ, ಯುವ ಹೂಡಿಕೆದಾರರು ರಕ್ಷಣೆ ಮತ್ತು ಉಳಿತಾಯದ ವಿಷಯದಲ್ಲಿ ಪಾಲಿಸಿಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಆದ್ದರಿಂದ ಸಾಧ್ಯವಾದಷ್ಟು ಬೇಗ ವಿಮೆಯನ್ನು ಖರೀದಿಸಿ, ತಮ್ಮನ್ನು ಸುರಕ್ಷಿತಗೊಳಿಸಿ.

Image Source : needpix.com

ಒನ್‌ಅಶ್ಯೂರ್ ಡಿಸ್ಟ್ರಿಬ್ಯೂಶನ್ ಪ್ಲಾಟ್ ಫಾರ್ಮ್ ಆಗಿದ್ದು, ಆರೋಗ್ಯ ಮತ್ತು ಹಣಕಾಸು ಒಗ್ಗೂಡುವ ವಿಷಯಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ವಿಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು oneassure.in ಗೆ ಭೇಟಿ ನೀಡಿ.

    Request for a free health insurance consultation

    Fields marked with an * are required


    Leave a Reply

    Your email address will not be published.