ಗೋಡಿಜಿಟ್ ಹೆಲ್ತ್‌ಕೇರ್ ಪ್ಲಾನ್ ಅಥವಾ ಐಸಿಐಸಿಐ ಐಹೆಲ್ತ್; ಯಾವ ಆರೋಗ್ಯ ವಿಮೆಯನ್ನು ಖರೀದಿಸುವುದು ಉಚಿತ?

ಎರಡೂ ನೀತಿಗಳ ನಡುವೆ ಕೆಲವು ವ್ಯತ್ಯಾಸಗಳಿದ್ದು, ಅವುಗಳ ಆಧಾರದ ಮೇಲೆ ನೀವು ನಿಮ್ಮ ಅಗತ್ಯ ಮತ್ತು ಆದ್ಯತೆಗಳನ್ನು ಅವಲಂಬಿಸಿ ತಕ್ಕ ನೀತಿಯನ್ನು ಆಯ್ದುಕೊಳ್ಳಬಹುದು.

ಉತ್ತಮ ಆರೋಗ್ಯ ವಿಮಾ ಯೋಜನೆಯು ತುರ್ತು ವೈದ್ಯಕೀಯ ಪರಿಸ್ಥಿತಿಯಲ್ಲಿ ನಮ್ಮ ಬಿಲ್‌ಗಳನ್ನು ಪಾವತಿಸುವುದಲ್ಲದೆ, ಇಂತಹ ಪರಿಸ್ಥಿತಿಗಳಲ್ಲಿ ಉಂಟಾಗುವ ಮಾನಸಿಕ ಅಶಾಂತಿಯಿಂದ ನಿಮ್ಮನ್ನು ಕಾಪಾಡುತ್ತದೆ. ಭಾರತದ ಆರೋಗ್ಯ ವಿಮಾ ಮಾರುಕಟ್ಟೆಯು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಭಾರತದಲ್ಲಿ ಶೇಖಡ 1% ಗಿಂತ ಕಡಿಮೆ ಜನರು ವಿಮೆಯ ರಕ್ಷಣೆಯನ್ನು ಪಡೆದಿದ್ದು, Covid -19 ನಂತಹ ರೋಗಗಳ ಹರಡುವಿಕೆಯ ಹಿನ್ನೆಲೆಯಲ್ಲಿ, ವಿಮಾ ಕಂಪನಿಗಳು ಅನೇಕ ಹೊಸ ಗ್ರಾಹಕರನ್ನು ಆಕರ್ಷಿಸುತ್ತಿವೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ವಿಮಾ ಯೋಜನೆಗಳ ಆಯ್ಕೆಗಳು ನಮ್ಮನ್ನು ಗಲಿಬಿಲಿ ಮಾಡುತ್ತವೆ. ಆದ್ದರಿಂದ, ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗೆ ವಿಮೆ ಮಾಡುವ ಮೊದಲು ನಿಯತಾಂಕಗಳನ್ನು ಕಟ್ಟುನಿಟ್ಟಾಗಿ ಅಳೆಯುವುದು ಬಹಳ ಮುಖ್ಯ. ಹಿಂದಿನ ಲೇಖನಗಳಲ್ಲಿ, ಸ್ಟಾರ್ ಕಾಂಪ್ರಹೆನ್ಸಿವ್ ಮತ್ತು ಎಬಿಎಚ್ಐ ಆಕ್ಟಿವ್ ಅಶ್ಯೂರ್ ಡೈಮಂಡ್ ಪಾಲಿಸಿಗಳನ್ನು; ಹಾಗೂ ಮ್ಯಾಕ್ಸ್ ಬೂಪಾ ಹೆಲ್ತ್ ಕಂಪ್ಯಾನಿಯನ್ ಮತ್ತು ಎಚ್ ಡಿ ಎಫ್ ಸಿ ಸುರಕ್ಷ ಪಾಲಿಸಿಗಳನ್ನು ಹೋಲಿಸಲಾಗಿದೆ. ಇಲ್ಲಿ, ನಾವು ಗೋಡಿಜಿಟ್ ಹೆಲ್ತ್‌ಕೇರ್ ಯೋಜನೆಯನ್ನು ಐಸಿಐಸಿಐ ಐಹೆಲ್ತ್‌ನೊಂದಿಗೆ ಹೋಲಿಸಿದ್ದೇವೆ. ಇವು ಮಾರುಕಟ್ಟೆಯಲ್ಲಿ ಲಭ್ಯವಿರುವ ಎರಡು ಜನಪ್ರಿಯ ಆರೋಗ್ಯ ಯೋಜನೆಗಳು. ಎರಡೂ ಯೋಜನೆಗಳು ಐಸಿಯು ಶುಲ್ಕಗಳನ್ನು, ಮತ್ತು 24 ಗಂಟೆಗಳಿಗಿಂತ ಹೆಚ್ಚಿನ ಆಸ್ಪತ್ರೆ ದಾಖಲು  ವೆಚ್ಚಗಳನ್ನು ಪೂರೈಸುತ್ತವೆ. ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯಂತಹ ಆಯುಷ್ ಅಡಿಯಲ್ಲಿ ಬರುವ ಚಿಕಿತ್ಸೆಗಳನ್ನು ಕೂಡ ಪೂರೈಸುತ್ತವೆ.

ಆದರೆ, ಎರಡೂ ನೀತಿಗಳ ನಡುವೆ ಕೆಲವು ವ್ಯತ್ಯಾಸಗಳಿದ್ದು, ಅವುಗಳ ಆಧಾರದ ಮೇಲೆ ನೀವು ನಿಮ್ಮ ಅಗತ್ಯ ಮತ್ತು ಆದ್ಯತೆಗಳನ್ನು ಅವಲಂಬಿಸಿ  ತಕ್ಕ ನೀತಿಯನ್ನು ಆಯ್ದುಕೊಳ್ಳಬಹುದು.

ಒನ್‌ಅಶ್ಯೂರ್ ಡಿಸ್ಟ್ರಿಬ್ಯೂಶನ್ ಪ್ಲಾಟ್ ಫಾರ್ಮ್ ಆಗಿದ್ದು, ಆರೋಗ್ಯ ಮತ್ತು ಹಣಕಾಸು ಒಗ್ಗೂಡುವ ವಿಷಯಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ವಿಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು oneassure.in ಗೆ ಭೇಟಿ ನೀಡಿ.

    Request for a free health insurance consultation

    Fields marked with an * are required


    Leave a Reply

    Your email address will not be published.