ನಿಮ್ಮ ಆರೋಗ್ಯ ವಿಮಾ ಯೋಜನೆಯ ಅಡಿಯಲ್ಲಿ ಕ್ಲೇಮ್ ಅರ್ಜಿ ಸಲ್ಲಿಸುವಾಗ ನೀವು ತಿಳಿದುಕೊಳ್ಳಬೇಕಾದ ವಿಷಯಗಳು

ಆರೋಗ್ಯ ವಿಮೆಯ ಕ್ಲೇಮ್ ಎಂದರೆ ವಿಮೆಯ ಅಡಿಯಲ್ಲಿ ಕವರೇಜ್ ಇರುವ ರೋಗಗಳ ವೈದ್ಯಕೀಯ ವೆಚ್ಚವನ್ನು ಒದಗಿಸಲು ಅಥವಾ ಮರುಪಾವತಿಸಲು, ನಿಮ್ಮ ವಿಮಾದಾರರಿಗೆ ನೀವು ಮಾಡುವ ಮನವಿ.

ಆರೋಗ್ಯ ವಿಮೆಯ ಕ್ಲೇಮ್ ಎಂದರೆ ವಿಮೆಯ ಅಡಿಯಲ್ಲಿ ಕವರೇಜ್ ಇರುವ ರೋಗಗಳ ವೈದ್ಯಕೀಯ ವೆಚ್ಚವನ್ನು ಒದಗಿಸಲು ಅಥವಾ ಮರುಪಾವತಿಸಲು, ನಿಮ್ಮ ವಿಮಾದಾರರಿಗೆ ನೀವು ಮಾಡುವ ಮನವಿ. ಕ್ಲೇಮ್ ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು, ಇತ್ತೀಚಿನ ದಿನಗಳಲ್ಲಿ ಬಹಳ ಸರಳವಾಗಿದೆ. ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಹೀಗಿವೆ.

ಕ್ಲೇಮ್ ಸಲ್ಲಿಸುವ ವಿಧಾನಗಳು ಯಾವುವು?

ಕ್ಲೇಮ್ ಪಡೆಯಲು ಎರಡು ಕ್ರಮಗಳಿವೆ:

ಎ) ನಗದುರಹಿತ (ಕ್ಯಾಶ್ ಲೆಸ್) – ವಿಮಾದಾರರ ನೆಟ್‌ವರ್ಕ್‌ ನಲ್ಲಿರುವ ನಿರ್ದಿಷ್ಟ ಆಸ್ಪತ್ರೆಯಲ್ಲಿ ನೀವು  ಚಿಕಿತ್ಸೆ ಪಡೆದರೆ ನಗದುರಹಿತ ಕ್ಲೇಮ್ ಸಾಧ್ಯವಾಗುವುದು. ನೀವು ಸಂಬಂಧಿತ ವಿಮಾ ವಿವರಗಳನ್ನು (ಪಾಲಿಸಿ ಸಂಖ್ಯೆ ಮತ್ತು ಆರೋಗ್ಯ ಕಾರ್ಡ್) ಒದಗಿಸಿದರೆ, ಆಸ್ಪತ್ರೆಯು ನಿಮ್ಮ ಬಿಲ್‌ಗಳನ್ನು ನೇರವಾಗಿ ವಿಮಾದಾರರಿಗೆ ಕಳುಹಿಸುತ್ತದೆ. ನಿಮ್ಮ ಜೇಬಿನಿಂದ ಒಂದು ರೂಪಾಯಿ ಖರ್ಚಾಗದೆ ನಿಮ್ಮ ಚಿಕಿತ್ಸೆ ಮತ್ತು ಆರೈಕೆ ನಡೆಯುವಂತೆ ಆಸ್ಪತ್ರೆ ಮತ್ತು ವಿಮಾದಾರರು ನೋಡಿಕೊಳ್ಳುತ್ತಾರೆ. ಆದರೆ ಆಸ್ಪತ್ರೆಗೆ ದಾಖಲು ಪೂರ್ವ-ಯೋಜಿತವಾಗಿದ್ದರೆ, ನೀವು ವಿಮಾದಾರರಿಗೆ ‘ಪ್ರವೇಶಕ್ಕೆ 24 ಗಂಟೆಗಳ ಮೊದಲು’ ತಿಳಿಸಬೇಕಾಗುತ್ತದೆ; ಮತ್ತು ತುರ್ತು ಪರಿಸ್ಥಿತಿಯಲ್ಲಿಆಸ್ಪತ್ರೆಗೆ ದಾಖಲಾಗಬೇಕಾದರೆ, ‘ಪ್ರವೇಶ ಪಡೆದ 24 ಗಂಟೆಗಳ ಒಳಗೆ’ ವಿಮಾದಾರರನ್ನು ಸೂಚಿಸಬೇಕಾಗುತ್ತದೆ.

ನಿಮ್ಮ ಒಟ್ಟು ಖರ್ಚು ನಿಮ್ಮ ವಿಮಾ ಪಾಲಿಸಿಯ ವ್ಯಾಪ್ತಿಯನ್ನು ಮೀರಿದರೆ, ಡಿಸ್ಚಾರ್ಜ್ ಸಮಯದಲ್ಲಿ ಉಳಿದ ಮೊತ್ತವನ್ನು ನೀವು ನೀಡಬೇಕಾಗುತ್ತದೆ.

ಬಿ) ಮರುಪಾವತಿ (ರಿಇಂಬರ್ಸ್ ಮೆಂಟ್) – ನೀವು ವಿಮಾದಾರರ ನೆಟ್‌ವರ್ಕ್‌ನ ಹೊರಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಎಲ್ಲಾ ಖರ್ಚುಗಳನ್ನು ಮೊದಲು ನೀವೇ ಪಾವತಿಸಬೇಕಾಗುತ್ತದೆ. ನಂತರ ನೀವು ಸಂಬಂಧಿತ ಎಲ್ಲಾ ದಾಖಲೆಗಳನ್ನು (ಪ್ರಿಸ್ಕ್ರಿಪ್ಷನ್‌, ರೋಗ ನಿರ್ಣಯ ಪರೀಕ್ಷೆ, ಔಷಧಿಗಳ ಬಿಲ್‌ ಇತ್ಯಾದಿ) ಒಟ್ಟುಗೂಡಿಸಿ ವಿಮಾದಾರರಿಗೆ ಕಳುಹಿಸಬೇಕಾಗುತ್ತದೆ. ವಿಮಾದಾರರು ದಾಖಲೆಗಳನ್ನು ಪರೀಕ್ಷಿಸಿ, ಕ್ಲೇಮ್ ಅಮ್ಗೀಕೃತವಾದ ನಂತರ ಖರ್ಚನ್ನು ಮರುಪಾವತಿ ಮಾಡುತ್ತಾರೆ. ಈ ಸಂದರ್ಭದಲ್ಲಿ, ಕ್ಲೇಮ್ ಸಂಸ್ಕರಿಸಿ ಮೊತ್ತವನ್ನು ವಿತರಿಸುವ ಪ್ರಕ್ರಿಯೆ 30-45 ದಿನಗಳ ಕಾಯುವ ಅವಧಿ ಹೊಂದಿರುತ್ತದೆ.

ಕ್ಲೇಮ್ ಪಡೆಯಲು ಅಗತ್ಯವಾದ ದಾಖಲೆಗಳು ಯಾವುವು?

ಎರಡೂ ರೀತಿಯ ಕ್ಲೇಮ್ ಪಡೆಯಲು ನೀವು ಮುಂದಿಡಬೇಕಾದ ದಾಖಲೆಗಳು ಇವು:

  1. ಪಾಲಿಸಿ ಸಂಖ್ಯೆ ಮತ್ತು ನಿಮ್ಮ ಆರೋಗ್ಯ ವಿಮಾ ಕಾರ್ಡ್ (ನಿಮ್ಮ ಬಳಿ ಇದ್ದರೆ).
  2. ಆಸ್ಪತ್ರೆಯಿಂದ ಸಹಿ ಮತ್ತು ಸ್ಟ್ಯಾಂಪ್ ಮಾಡಲ್ಪಟ್ಟ, ಎಲ್ಲಾ ಮೂಲ ಬಿಲ್ ಗಳು.
  3. ವೈದ್ಯರ ವರದಿ, ರೋಗನಿರ್ಣಯ ಪರೀಕ್ಷೆಗಳ ವರದಿ, ಆಸ್ಪತ್ರೆ ದಾಖಲು ವರದಿ, ಔಷಧಿಗಳ ಬಿಲ್‌ ಮತ್ತು ನಿಮ್ಮ ಪಾಲಿಸಿಯ ವ್ಯಾಪ್ತಿಯಲ್ಲಿ ಬರುವ ಎಲ್ಲ ವೈದ್ಯಕೀಯ ಮಸೂದೆಗಳು.
  4. ಆಸ್ಪತ್ರೆಯಿಂದ ಒದಗಿಸಲಾದ ಡಿಸ್ಚಾರ್ಜ್ ಸಾರಾಂಶ.

ಕ್ಲೇಮ್ ಅರ್ಜಿ ಸಲ್ಲಿಸುವಾಗ ನೀವು ಮೂಲ ಕಾಗದ ಪತ್ರಗಳನ್ನು ವಿಮಾದಾರರಿಗೆ  ಕಳುಹಿಸಬೇಕಾಗಬಹುದು, ಆದ್ದರಿಂದ ನೀವು ತಮ್ಮ ವೈಯಕ್ತಿಕ ದಾಖಲೆಗಾಗಿ, ಅವುಗಳ ನಕಲು ತಯಾರಿಸಿ ಇಡುವುದು ಸೂಕ್ತ.

ಅನೇಕ ನೀತಿಗಳ ಅಡಿಯಲ್ಲಿ ಕ್ಲೇಮ್ ಪಡೆಯುವುದು ಹೇಗೆ?

ಅನೇಕರು ತಮ್ಮ ಒಟ್ಟಾರೆ ಕವರೇಜ್ ನ್ನು ಹೆಚ್ಚಿಸಲು ಒಂದಕ್ಕಿಂತ ಹೆಚ್ಚು ಆರೋಗ್ಯ ನೀತಿಗಳನ್ನು ಖರೀದಿಸುತ್ತಾರೆ. ಇದು ಉತ್ತಮ ಅಭ್ಯಾಸ, ಆದರೆ ಪಾಲಿಸಿಯನ್ನು ಖರೀದಿಸುವಾಗ ಅಥವಾ ಕವರೇಜ್ ನ ಕ್ಲೇಮ್ ಪಡೆಯುವಾಗ, ನೀವು ಎರಡೂ ವಿಮಾ ಕಂಪನಿಗಳಿಗೆ ಮತ್ತೊಂದು ಯೋಜನೆಯನ್ನು ಹೊಂದಿರುವ ಬಗ್ಗೆ ತಿಳಿಸಬೇಕು. ‘ಕಾಂಟ್ರಿಬ್ಯೂಶನ್ ಕ್ಲಾಸ್’ (ಕೊಡುಗೆ ಷರತ್ತು) ಪೂರೈಸಲು ಈ ವಿಷಯವನ್ನು ಬಹಿರಂಗಪಡಿಸುವುದು ಅವಶ್ಯಕ. 

ಕಾಂಟ್ರಿಬ್ಯೂಶನ್ ಕ್ಲಾಸ್ ಪ್ರಕಾರ, ವಿಮಾದಾರರು ನಿಮ್ಮ ಒಟ್ಟಾರೆ ಕವರ್‌ನಲ್ಲಿ, ವಿಮೆ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಹಣವನ್ನು ಪಾವತಿಸುತ್ತಾರೆ. ನೀವು 1 ಲಕ್ಷ ರೂ. ಮೊತ್ತದ ‘ಪಾಲಿಸಿ X’ ಮತ್ತು 2 ಲಕ್ಷ ರೂ.  ಮೊತ್ತದ ‘ಪಾಲಿಸಿ Y’ ಹೊಂದಿದ್ದು, 50,000 ರೂ.ಗಳ ಕ್ಲೇಮ್ ಮಾಡಿದರೆ, ಕಾಂಟ್ರಿಬ್ಯೂಶನ್ ಕ್ಲಾಸ್ ಅಡಿಯಲ್ಲಿ ನಿಮಗೆ ಪಾಲಿಸಿ X 16,666 ರೂ. ಮತ್ತು ಪಾಲಿಸಿ Y 33,333 ರೂ. ಒದಗಿಸುತ್ತವೆ.

ಆದಾಗ್ಯೂ, ನಿಮ್ಮ ಕ್ಲೇಮ್ ಮೊತ್ತವು, ಎರಡರಲ್ಲಿ ಒಂದು ವಿಮೆಯ ಮೊತ್ತಕ್ಕಿಂತ ಹೆಚ್ಚಿದ್ದರೆ ಮಾತ್ರ ಕಾಂಟ್ರಿಬ್ಯೂಶನ್ ಕ್ಲಾಸ್ ಅನ್ವಯಿಸುತ್ತದೆ. ಆದ್ದರಿಂದ, ಹೊಸ ನಿಯಮದ ಪ್ರಕಾರ, ಮೇಲಿನ ಉದಾಹರಣೆಯನ್ನು ತೆಗೆದುಕೊಂಡರೆ, ನಿಮ್ಮ ಹಕ್ಕು ರೂ. 1 ಲಕ್ಷಕ್ಕಿಂತ ಹೆಚ್ಚಿದ್ದರೆ ಕಾಂಟ್ರಿಬ್ಯೂಶನ್ ಕ್ಲಾಸ್ ಜಾರಿಗೆ ಬರುತ್ತದೆ. ನಿಮ್ಮ ಕ್ಲೇಮ್ 1,50,000 ರೂ. ಆಗಿದ್ದರೆ, ಇದು ಪಾಲಿಸಿ X ನ 1 ಲಕ್ಷ ರೂ. ಕವರ್‌ಗಿಂತ ಹೆಚ್ಚಾಗುತ್ತದೆ. ಕಾಂಟ್ರಿಬ್ಯೂಶನ್ ಕ್ಲಾಸ್ ಪ್ರಕಾರ, ವಿಮೆಯ ಮೊತ್ತಕ್ಕೆ ಅನುಗುಣವಾಗಿ ಪಾಲಿಸಿ X ನಿಮಗೆ 50,000 ರೂ. ಮತ್ತು ಪಾಲಿಸಿ Y ನಿಮಗೆ 1 ಲಕ್ಷ ರೂ. ನೀಡುತ್ತದೆ

ಡಿಫೈನ್ಡ ಬೆನಿಫಿಟ್ ಪ್ಲಾನ್ ಇದ್ದಲ್ಲಿ ಕ್ಲೇಮ್ ಪಡೆಯುವುದು ಹೇಗೆ?

ಡಿಫೈನ್ಡ ಬೆನಿಫಿಟ್ ಪ್ಲಾನ್ ಪಾಲಿಸಿದಾರರಿಗೆ, ಪೂರ್ವಸಿದ್ಧ ನಿರ್ದಿಷ್ಟ ಕಾಯಿಲೆಗಳಿಗೆ ವಿಮೆ ನೀಡುತ್ತವೆ. ನೀವು ಯೋಜನೆಯಡಿಯಲ್ಲಿ ಬರುವ ರೋಗಕ್ಕೆ ಚಿಕಿತ್ಸೆ ಪಡುಯುತ್ತಿರುವಿರಿ ಎಂದು ತಿಳಿಸಲು ವಿಮಾದಾರರಿಗೆ ಒಪ್ಪಿಗೆಯಾಗುವ ದಾಖಲೆಗಳನ್ನು (ರೋಗನಿರ್ಣಯ ಪರೀಕ್ಷೆ, ಪ್ರಿಸ್ಕ್ರಿಪ್ಷನ್, ಇತ್ಯಾದಿ) ಒದಗಿಸಬೇಕಾಗುತ್ತದೆ. ಯೋಜನೆಯಲ್ಲಿ ನಿರೂಪಿಸಿರುವ ರೋಗಗಳ ಚಿಕಿತ್ಸೆಗೆ ಮಾತ್ರ ನಿಮಗೆ ಪಾವತಿ ದೊರೆಯುತ್ತದೆ. ಪಾವತಿಯು ನೇರವಾಗಿ ನಿಮ್ಮ ಖಾತೆಗೆ ಅಥವಾ, ನಿಮ್ಮ ನೀತಿಯ ನಿಯಮಗಳು ಮತ್ತು ಷರತ್ತುಗಳಲ್ಲಿ ಉಲ್ಲೇಖಿಸಿರುವ ರೀತಿಯಲ್ಲಿ ನಿಮಗೆ ತಲುಪುತ್ತದೆ.

ಕ್ಲೇಮ್ ಎಲ್ಲಿ ಸಲ್ಲಿಸಬಹುದು?

  1. ನೆಟ್‌ವರ್ಕ್ ಆಸ್ಪತ್ರೆಗಳು – ವಿಮಾದಾರರ ನೆಟ್‌ವರ್ಕ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ನೀವು ಆಸ್ಪತ್ರೆಯಲ್ಲಿನ ವಿಮಾ ಡೆಸ್ಕ್‌ಗೆ ಭೇಟಿ ನೀಡಿ ಸಂಬಂಧಿತ ದಾಖಲೆಗಳನ್ನು ಒದಗಿಸಿದರೆ, ಸಿಬ್ಬಂದಿ ನಿಮ್ಮ ಕ್ಲೇಮ್ ಸಲ್ಲಿಸುತ್ತಾರೆ.
  2. ನೋನ್-ನೆಟ್‌ವರ್ಕ್ ಆಸ್ಪತ್ರೆಗಳು – ವಿಮಾದಾರರ ನೆಟ್‌ವರ್ಕ್ ನಲ್ಲಿ ಇಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕ್ಲೇಮ್ ಸಲ್ಲಿಸಲು ನೀವು ವಿಮಾದಾರರ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ವಿಮಾದಾರರು ತಮ್ಮ ವೆಬ್‌ಸೈಟ್‌ನ ಒಂದು ವಿಭಾಗದಲ್ಲಿ, ಕ್ಲೇಮ್ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಲು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ನೀವು ಈ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪೂರ್ಣಗೊಳಿಸಬಹುದು. ಅಥವಾ ಕ್ಲೇಮ್ ಪ್ರಕ್ರಿಯೆಯ ಕಾರ್ಯಸೂಚಿಯನ್ನು ನೀವು ನಿಮ್ಮ ನೀತಿಯನ್ನು ಓದಿ ಕೂಡ ಪಡೆಯಬಹುದು.
  3. ಒನ್ ಅಶ್ಯೂರ್ – ಕ್ಲೇಮ್ ಸಲ್ಲಿಸಲು ಒನ್ ಅಶ್ಯೂರ್ ನಿಮಗೆ ಸಹಾಯ ನೀಡುತ್ತದೆ. ಕ್ಲೇಮ್ ಪರಿಹಾರಕ್ಕಾಗಿ ನೀವು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಒನ್‌ಅಶ್ಯೂರ್ ಡಿಸ್ಟ್ರಿಬ್ಯೂಶನ್ ಪ್ಲಾಟ್ ಫಾರ್ಮ್ ಆಗಿದ್ದು, ಆರೋಗ್ಯ ಮತ್ತು ಹಣಕಾಸು ಒಗ್ಗೂಡುವ ವಿಷಯಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ವಿಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು oneassure.in ಗೆ ಭೇಟಿ ನೀಡಿ.

    Request for a free health insurance consultation

    Fields marked with an * are required


    Leave a Reply

    Your email address will not be published.