ನಿಮ್ಮ ಕುಟುಂಬದ ಸದಸ್ಯರಲ್ಲಿ ಡಯಾಬಿಟೀಸ್ ಪ್ರಚಲಿತವಾಗಿದ್ದರೆ, ಕಡ್ಡಾಯವಾಗಿ ಈ ಯೋಜನೆಯನ್ನು ಖರೀದಿಸಿ

ನಿಮ್ಮ ಕುಟುಂಬದಲ್ಲಿ ಡಯಾಬಿಟೀಸ್ ಇದ್ದರೆ, ಪರಿಪೂರ್ಣ ಆರೋಗ್ಯ ವಿಮಾ ಯೋಜನೆಯು ನಿಮ್ಮ ತುರ್ತು ಆವಶ್ಯಕತೆ.

ಡಯಾಬಿಟೀಸ್ ಹೆರೆಡಿಟರಿ ಕಾಯಿಲೆಯಲ್ಲ. ಆದರೆ ನಿಮ್ಮ ವಂಶವಾಹಿ(ಜೀನ್)ಗಳು ನಿಮ್ಮನ್ನು ಈ ಕಾಯಿಲೆಗೆ ಗುರಿಯಾಗಿಸಬಹುದು ಮತ್ತು ನಿಮ್ಮ ಜೀವನಶೈಲಿ ಅದನ್ನು ವೇಗಗೊಳಿಸಬಹುದು. ಕುಟುಂಬದಲ್ಲಿ ಡಯಾಬಿಟೀಸ್ ಹೊಂದಿರುವ ಜನರು ಅಧಿಕವಾಗಿ ರಕ್ತದೊತ್ತಡ(ಬ್ಲಡ್  ಪ್ರೆಷರ್), ಹೃದಯದ  ಕಾಯಿಲೆ ಮುಂತಾದುವುಗಳಿಗೆ ಗುರಿಯಾಗುತ್ತಾರೆ. ಅಧ್ಯಯನಗಳ ಪ್ರಕಾರ, ಪ್ರತಿವರ್ಷ ಡಯಾಬಿಟೀಸ್ ನ ವೈದ್ಯಕೀಯ ಚಿಕಿತ್ಸೆಗೆ ನಿಮಗೆ 80,000 ರಿಂದ ಲಕ್ಷ ರೂಪಾಯಿ ವರೆಗೆ ಖರ್ಚಾಗಬಹುದು . ಹೀಗೆ ಡಯಾಬಿಟೀಸ್  ಅಪಾಯಕಾರಿಯಾಗಿದ್ದು, ವಿಮಾ ಅಂಡರ್ರೈಟರ್ ಗಳು ಡಯಾಬಿಟೀಸ್ ನ್ನು ಹೆರೆಡಿಟರಿ ಕಾಯಿಲೆಗಳಿಗೆ ಸಮನಾಗಿ ಕಾಣುತ್ತಾರೆ ಮತ್ತು ಅದನ್ನು ಲೋಡಿಂಗ್ ಗೆ (ಹೆಚ್ಚಿನ ಅಪಾಯದ ಕಾಯಿಲೆಗಳಿಗೆ ನೀತಿಯಲ್ಲಿ ಕೂಡಿಸುವ ಹೆಚ್ಚುವರಿ ವೆಚ್ಚ) ಪರಿಗಣಿಸುತ್ತಾರೆ .

ಆದ್ದರಿಂದ, ನಿಮ್ಮ ಕುಟುಂಬದಲ್ಲಿ ಡಯಾಬಿಟೀಸ್ ಇದ್ದರೆ,  ಪರಿಪೂರ್ಣ ಆರೋಗ್ಯ ವಿಮಾ ಯೋಜನೆಯು ನಿಮ್ಮ ತುರ್ತು ಆವಶ್ಯಕತೆ.

ನಿಮ್ಮ ಕುಟುಂಬದಲ್ಲಿ ಡಯಾಬಿಟೀಸ್ ಇದ್ದರೆ ಯಾವ ಯೋಜನೆಯನ್ನು ಖರೀದಿಸಬೇಕು?

ಪ್ರಕರಣ 1: ನಿಮಗೆ ಡಯಾಬಿಟೀಸ್ ಇಲ್ಲ, ಆದರೆ ನಿಮ್ಮ ಕುಟುಂಬದಲ್ಲಿ ಡಯಾಬಿಟೀಸ್ ನ ದೀರ್ಘ ಪ್ರಚಲನೆ ಇರುವುದು

ಈ ಸಂದರ್ಭದಲ್ಲಿ ನೀವು ಡಯಾಬಿಟೀಸ್ ಗೆ ಕವರೇಜ್ ನೀಡುವ ನಿಯಮಿತ ಆರೋಗ್ಯ ವಿಮಾ ಯೋಜನೆಯನ್ನು ಖರೀದಿಸುವುದು ಒಳ್ಳೆಯದು. ಅದೇ ಕವರೇಜ್ ಗೆ ಕಡಿಮೆ ಖರ್ಚಿನಲ್ಲಿ ಈ ಯೋಜನೆಯನ್ನು ಜೀವನಪೂರ್ತಿ ನವೀಕರಿಸಬಹುದು. ಇದು 2-4 ವರ್ಷಗಳ ಕಾಯುವ ಅವಧಿ(ವೈಟಿಂಗ್ ಪಿರಿಯಡ್)ಯನ್ನು ಹೊಂದಿರಬಹುದು, ಆದರೆ ನಿಮ್ಮ ಕವರೇಜ್ ನ್ನು ಹೆಚ್ಚಿಸಲು ನೀವು ಡಯಾಬಿಟೀಸ್-ನಿರ್ದಿಷ್ಟ ಆಡ್-ಆನ್ ಅನ್ನು ಕೂಡ ಖರೀದಿಸಬಹುದು. 

ಆದಿತ್ಯ ಬಿರ್ಲಾ ಹೆಲ್ಥ್ ಎಸ್ಸೆನ್ಶಿಯಲ್ ಯೋಜನೆಯು, ಖರೀದಿಸಿದ ಪ್ರಥಮ ದಿನದಿಂದಲೇ, ತನ್ನ ಖ್ರೋನಿಕ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ಅಡಿಯಲ್ಲಿ ಡಯಾಬಿಟೀಸ್ ಗೆ ಕವರೇಜ್ ನೀಡುತ್ತದೆ. ಇದು ರೋಗನಿರ್ಣಯ ಪರೀಕ್ಷೆಗಳ ಶುಲ್ಕ, ವೈದ್ಯರ ಶುಲ್ಕ, ಆಸ್ಪತ್ರೆ ದಾಖಲು ಖರ್ಚು ಮತ್ತು ಔಷಧಿಗಳ ವೆಚ್ಚವನ್ನು ಒದಗಿಸುತ್ತದೆ.

ಈ ಯೋಜನೆಯು, ನೀವು ಕ್ಲೇಮ್ ಪಡೆಯದ ಪ್ರತಿ ವರ್ಷವೂ, ಕವರೇಜ್ ಮೊತ್ತವನ್ನು 10% ಹೆಚ್ಚಿಸುತ್ತದೆ. ಹಾಗೂ, ನೀವು ಆಸ್ಪತ್ರೆಗೆ ದಾಖಲಾದರೆ, 30 ದಿನಗಳ ವರೆಗೆ ಪ್ರತಿದಿನ ರೂ. 5000 ರಷ್ಟರ ಆರ್ಥಿಕ ಬೆಂಬಲವನ್ನು ನೀಡುತ್ತದೆ. ಅಲ್ಲದೆ, ಆದಿತ್ಯ ಬಿರ್ಲಾ ಯೋಜನೆಯು ಪಾಲಿಸಿದಾರರಿಗೆ ಆರೋಗ್ಯಕರ ಜೀವನವನ್ನು ನಡೆಸಲು, ತರಬೇತುದಾರರ ಮೂಲಕ ಮಾರ್ಗದರ್ಶನ ಮತ್ತು ಸಲಹೆಯನ್ನು ನೀಡುತ್ತದೆ.

ಪ್ರಕರಣ 2: ನಿಮ್ಮ ಕುಟುಂಬದಲ್ಲಿ ಡಯಾಬಿಟೀಸ್ ನ ಪ್ರಚಲನೆ ಇದ್ದು, ನೀವು ಕೂಡ ಡಯಾಬಿಟೀಸ್ ಹೊಂದಿರುವುದು 

ರೆಲಿಗೇರ್‌ನ ಕೇರ್ ಫ್ರೀಡಮ್ ಯೋಜನೆಯು ಡಯಾಬಿಟೀಸ್ ನ ಸನ್ನಿವೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಯೋಜನೆಗಳಲ್ಲಿ ಒಂದು: ಏಕೆಂದರೆ ಈ ಯೋಜನೆಯು

  1. ಆಸ್ಪತ್ರೆ ದಾಖಲಿಗೆ ಹಾಗೂ ಇತರ ಡೇ ಕೇರ್ ಖರ್ಚುಗಳಿಗೆ ವಿಮೆಯ ಮೊತ್ತದಷ್ಟು ಕವರೇಜ್ ನೀಡುತ್ತದೆ.
  2. ಪ್ರತಿದಿನ(7 ದಿನಗಳವರೆಗೆ)  ಪ್ರಯಾಣ, ದಿನ ಬಳಕೆಯ ವಸ್ತುಗಳು, ಅಟೆಂಡೆಂಟ್ ಶುಲ್ಕ ಮುಂತಾದ ವೈದ್ಯಕೀಯೇತರ ವೆಚ್ಚಗಳಿಗಾಗಿ ರೂ.1,000 ರಷ್ಟು ಒದಗಿಸುತ್ತದೆ. ಅಲ್ಲದೆ, ಮಾಸಿಕ ಇನ್ಸುಲಿನ್ ಡೋಸೇಜ್‌ನಂತಹ ಅಗತ್ಯ ವಸ್ತುಗಳ ವೆಚ್ಚಕ್ಕೆ ಸಾಕಷ್ಟು ವ್ಯಾಪ್ತಿಯನ್ನು ನೀಡುತ್ತದೆ.
  3. ಆಸ್ಪತ್ರೆ ದಾಖಲು ಅವಧಿಯು 10 ದಿನಗಳನ್ನು ಮೀರಿದರೆ ರೂ. 15,000 ರಷ್ಟು ‘ಕಂಪ್ಯಾನಿಯನ್ ಬೆನಿಫಿಟ್’(ನಿಮ್ಮ ಆರೈಕೆ ಮಾಡುವವರ ಶುಲ್ಕ) ನೀಡುತ್ತದೆ.
  4. ಡೊಮಿಸಿಲಿಯರಿ ಹಾಸ್ಪಿಟಲೈಸೇಶನ್ ಗೆ  ವಿಮೆಯ 10% ಹಣದಷ್ಟು ಕವರೇಜ್ ನೀಡಲಾಗುತ್ತದೆ. ಇದರರ್ಥ, ನಿಮಗೆ ಆಸ್ಪತ್ರೆ ದಾಖಲು ಅಗತ್ಯವಾಗಿದ್ದು, ಯಾವುದೇ ಕಾರಣಕ್ಕೆ  ಅದು ಸಾಧ್ಯವಾಗದಿದ್ದರೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಆ ಚಿಕಿತ್ಸೆಯ ವೆಚ್ಚದ 10% ರಷ್ಟನ್ನು ನಿಮಗೆ ಹಿಂದಿರುಗಿಸಲಾಗುತ್ತದೆ.
  5. ಕ್ಲೇಮ್ ಮಾಡುವುದರ ಮೂಲಕ ನಿಮ್ಮ ಕವರೇಜ್ ಹಣ ದಣಿದಿದ್ದರೆ, ಅದನ್ನು ತಕ್ಷಣ ಸಂಪೂರ್ಣವಾಗಿ ಪುನಃಸ್ಥಾಪನೆ ಮಾಡುವುದರ ಮೂಲಕ, ಎಲ್ಲ ಸಮಯದಲ್ಲೂ ನಿಮಗೆ ವಿಮೆಯ ರಕ್ಷಣೆ ದೊರಕಿಸುತ್ತದೆ. 
  6. ನೀವು ಆಸ್ಪತ್ರೆಗೆ ದಾಖಲಾದ ಪೂರ್ವದ 30 ದಿನಗಳು ಮತ್ತು ನಂತರದ 30 ದಿನಗಳು ಮಾಡಿದ ವೈದ್ಯಕೀಯ ವೆಚ್ಚಗಳಿಗಾಗಿ ವಿಮೆಯ ಮೊತ್ತದ 10% ರಷ್ಟು ಮರುಪಾವತಿ ನೀಡುತ್ತದೆ, ಹೀಗೆ ದೀರ್ಘಕಾಲದವರೆಗೆ ನಿಮಗೆ ಸಮಗ್ರ ಆರೈಕೆಯನ್ನು ನೀಡುತ್ತದೆ.
  7. ಸತತ 24 ತಿಂಗಳುಗಳ ವರೆಗೆ, ಪ್ರತಿ ಡಯಾಲಿಸಿಸ್ ಸೆಷನ್ ಗೆ  ರೊ. 1,000 ರಷ್ಟು ನೀಡುತ್ತದೆ. ಡಯಾಬಿಟೀಸ್ ರೋಗಿಗಳಲ್ಲಿ ಮೂತ್ರಪಿಂಡದ ಕಾಯಿಲೆಗಳು ಸಾಮಾನ್ಯವಾದ ಕಾರಣ, ಈ ಸೌಕರ್ಯವು ಮಹತ್ವಪೂರ್ಣವಾದುದು.

ಸ್ಟಾರ್ ಡಯಾಬಿಟೀಸ್ ಸೇಫ್ ಮತ್ತೊಂದು ಡಯಾಬಿಟೀಸ್-ನಿರ್ದಿಷ್ಟ ವಿಮಾ ಯೋಜನೆಯಾಗಿದ್ದು, ಈ ಕೆಳಗಿನ ಪ್ರಯೋಜನಗಳನ್ನು ನೀಡುತ್ತದೆ:

  1. ಇದರಲ್ಲಿ ಎರಡು ಯೋಜನೆಗಳಿವೆ – ಪ್ಲ್ಯಾನ್ A ಮತ್ತು ಪ್ಲ್ಯಾನ್ B. ಪ್ಲ್ಯಾನ್ A ಡಯಾಬಿಟೀಸ್ ನಿಂದ ಆಗುವ ತೊಂದರೆಗಳಿಗೆ ತಕ್ಷಣವೇ ಕವರೇಜ್ ನೀಡುತ್ತದೆ, ಆದರೆ ಇದನ್ನು ಪಡೆಯಲು ಪ್ರಾಥಮಿಕ ವೈದ್ಯಕೀಯ ಪರೀಕ್ಷೆ ಆವಶ್ಯಕ. ಪ್ಲ್ಯಾನ್ B ಆ ವೆಚ್ಚಗಳಿಗೆ 12 ತಿಂಗಳುಗಳ ನಂತರ, ವೈದ್ಯಕೀಯ ಪರೀಕ್ಷೆಯ ವಿನಾ, ಕವರೇಜ್ ನೀಡುತ್ತದೆ.
  2. ವಿಮೆ ಮಾಡಿದ ಮೊತ್ತವು 10 ಲಕ್ಷ ರೂ.ಗಳಷ್ಟು ಆಗಿರಬಹುದು ಮತ್ತು ಇದು ವೈದ್ಯರೊಡನೆ ಭೇಟಿ, ಇತರ ರೋಗನಿರ್ಣಯ ಪರೀಕ್ಷೆ, ಔಷಧಿ ಮುಂತಾದ OPD ವೆಚ್ಚಗಳಿಗೆ ರೂ, 5,500 ರಷ್ಟು ಕವರೇಜ್ ನೀಡುತ್ತದೆ. ಈ ಕವರೆಜ್ ಇನ್ಸುಲಿನ್ ಶಾಟ್ ಖರೀದಿಸಲು ಕೂಡ ನಿಮಗೆ ಸಹಾಯ ಮಾಡುತ್ತದೆ.
  3. ಇದು ಫಾಸ್ಟಿಂಗ್ ಮತ್ತು ಪೋಸ್ಟ್‌ಪ್ರಾಂಡಿಯಲ್, ಮತ್ತು HbA1C ಪರೀಕ್ಷೆಗಳಿಗೆ (ಪ್ರತಿ ಆರು ತಿಂಗಳಿಗೊಮ್ಮೆ) ಪ್ರತಿ ಪಾಲಿಸಿ ಅವಧಿಗೆ ರೂ .1500 / – ವರೆಗೆ, ಮತ್ತು ಪ್ರತಿ ಘಟನೆಗೆ ರೂ .750 / – ವರೆಗೆ ಕವರೇಜ್ ನೀಡುತ್ತದೆ. ಹೀಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು ನಿಮ್ಮ ಸಹಾಯ ಮಾಡುತ್ತದೆ.
  4. ಮುಖ್ಯವಾಗಿ, ನಿಮಗೆ ಡಯಾಲಿಸಿಸ್ ನಿಯಮಿಸಿದ ತಿಂಗಳಿನಿಂದ 24 ತಿಂಗಳುಗಳ ವರೆಗೆ, ಪ್ರತಿ ಡಯಾಲಿಸಿಸ್ ಸೆಷನ್ ಗೆ  ರೊ. 1,000 ರಷ್ಟು ನೀಡುತ್ತದೆ.

ನಿಮ್ಮ ಅಗತ್ಯಗಳನ್ನು ಆಧರಿಸಿ ಈ ಕೆಲವು ಪ್ರಮುಖ ಯೋಜನೆಗಳಲ್ಲಿ, ನಿಮಗೆ ಸೂಕ್ತವಾದ ಯೋಜನೆಯನ್ನು ಖರೀದಿಸಬಹುದು.

ಒನ್‌ಅಶ್ಯೂರ್ ಡಿಸ್ಟ್ರಿಬ್ಯೂಶನ್ ಪ್ಲಾಟ್ ಫಾರ್ಮ್ ಆಗಿದ್ದು, ಆರೋಗ್ಯ ಮತ್ತು ಹಣಕಾಸು ಒಗ್ಗೂಡುವ ವಿಷಯಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ವಿಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು oneassure.in ಗೆ ಭೇಟಿ ನೀಡಿ.

    Request for a free health insurance consultation

    Fields marked with an * are required


    Leave a Reply

    Your email address will not be published.