ಎಂಪ್ಲಾಯರ್ ಆದ ನೀವು ಒದಗಿಸಬೇಕಾದ ಕಾರ್ಪೊರೇಟ್ ವಿಮಾ ಯೋಜನೆಯ ಲಕ್ಷಣಗಳು ಯಾವುವು?

ಒಳ್ಳೆಯ ಆರೋಗ್ಯ ವಿಮಾ ಯೋಜನೆಯು, ನೀವು ನಿಮ್ಮ ಉದ್ಯೋಗಿಗಳಿಗೆ ನೀಡಬಹುದಾದ ಅತ್ಯುತ್ತಮ ಅನುಕೂಲ.

ಒಳ್ಳೆಯ ಆರೋಗ್ಯ ವಿಮಾ ಯೋಜನೆಯು, ನೀವು ನಿಮ್ಮ ಉದ್ಯೋಗಿಗಳಿಗೆ ನೀಡಬಹುದಾದ ಅತ್ಯುತ್ತಮ ಅನುಕೂಲ. ಎಂಪ್ಲಾಯರ್ ಆಗಿ, ನೀವು ಸುಗಮ ಕಾರ್ಪೊರೇಟ್ ವಿಮಾ ಯೋಜನೆಯನ್ನು ನೀಡಿದರೆ ಉದ್ಯೋಗಿಗಳು ನಿಮ್ಮ ಕಂಪನಿಯಲ್ಲಿ ಉಳಿದುಕೊಳ್ಳುತ್ತಾರೆ, ಗೈರುಹಾಜರಿ ಕಡಿಮೆಯಾಗುತ್ತದೆ ಮತ್ತು ಕಂಪನಿಯು ಹೊಸ ಉದ್ಯೋಗಿಗಳನ್ನು ಆಕರ್ಷಿಸುತ್ತದೆ. ಈ ರೀತಿಯ ಗುಂಪು ನೀತಿ(ಗ್ರೂಪ್ ಪ್ಲಾನ್) ಗಳನ್ನು ಒಗ್ಗಿಸಿ, ನೀವು ನಿಮ್ಮ ಕಂಪನಿಯ ಅಗತ್ಯಗಳಿಗೆ ತಕ್ಕಂತೆ ನೀತಿಯ ಪ್ರಮುಖ ಅಂಶಗಳನ್ನು ಬದಲಾಯಿಸಬಹುದು. ಇವುಗಳಿಗೆ ಕಾಯುವ ಅವಧಿ(ವೈಟಿಂಗ್ ಪಿರಿಯಡ್) ಇರುವುದಿಲ್ಲ. ಹೀಗಾಗಿ ನಿಮ್ಮ ಉದ್ಯೋಗಿಗಳು ಮೊದಲ ದಿನದಿಂದಲೇ ವಿಮೆಯ ರಕ್ಷಣೆಯನ್ನು ಆನಂದಿಸಬಹುದು. ಆದ್ದರಿಂದ, ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡುವುದು ಆರ್ಥಿಕ (ತೆರಿಗೆಯಲ್ಲಿ ಉಳಿತಾಯ) ಲಾಭವಲ್ಲದೆ, ದೀರ್ಘಾವಧಿಯಲ್ಲಿ ನಿಮ್ಮ ಉದ್ಯೋಗಿಗಳ ಆರೋಗ್ಯವನ್ನೂ ಸುಧಾರಿಸುತ್ತದೆ. 

ನಿಮ್ಮ ಉದ್ಯೋಗಿಗಳಿಗೆ ಉತ್ತಮ ಕಾರ್ಪೊರೇಟ್ ವಿಮಾ ಯೋಜನೆಯನ್ನು ಆರಿಸುವುದು ಹೇಗೆ?

ಯೋಜನೆಯ ವೆಚ್ಚ 

ಯೋಜನೆಯನ್ನು ಪಡೆಯಲು ನಿಮಗೆ ಮತ್ತು ನಿಮ್ಮ ಉದ್ಯೋಗಿಗೆ ಎಷ್ಟು ಖರ್ಚಾಗುವುದು, ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಕಂಪನಿಯು ಸಂಪೂರ್ಣ ವೆಚ್ಚವನ್ನು ಭರಿಸಬಹುದೇ ಅಥವಾ ಕೆಲಸಗಾರರು ಸಹ ಕೊಡುಗೆ ನೀಡಬೇಕೇ? ಉದ್ಯೋಗಿಗಳು ಖರ್ಚು ನೀಡಬೇಕಾದರೆ, ಆ ವೆಚ್ಚವು ಅವರ ವೇತನಕ್ಕೆ ಅನುಗುಣವಾಗಿದೆಯೇ? ಯೋಜನೆಯ ವೆಚ್ಚವನ್ನು ಇಳಿಸಲು ಯೋಜನೆಯ ಕೆಲವು ಅಂಶಗಳಲ್ಲಿ ಸಹ-ವಿಮೆ(ಕೋ-ಇನ್ಶೂರೆನ್ಸ್) ಅಥವಾ ಉಪ-ಮಿತಿ(ಸಬ್ ಲಿಮಿಟ್ಸ್) ಗಳನ್ನು ಸೇರಿಸಬಹುದು.

ಸಹ-ವಿಮೆ(ಕೋ-ಇನ್ಶೂರೆನ್ಸ್) ಮತ್ತು ಕಡಿತಗಳು

ಎಂಪ್ಲಾಯರ್ ಆದ ನೀವು, ನಿಮ್ಮ ನೌಕರರು ಸಹ-ವಿಮೆ ಮತ್ತು ಕಡಿತಗಳನ್ನು ವಹಿಸಲು ಸಮರ್ಥರೇ ಎಂಬುದನ್ನು ತಿಳಿದುಕೊಳ್ಳಬೇಕು. 10% ಸಹ-ವಿಮೆ ಎಂದರೆ, ಪ್ರತಿ ರೂ. 100 ಗೆ ವಿಮೆ ಮಾಡಿದ ವ್ಯಕ್ತಿಯು ರೂ. 10 ಮತ್ತು ವಿಮಾದಾರರು ರೂ. 90 ನೀಡಬೇಕಾಗುತ್ತದೆ. 10% ಕಡಿತ ಎಂದರೆ, ವಿಮೆ ಮಾಡಿದ ವ್ಯಕ್ತಿಯು ರೂ. 10 ಭರಿಸಿದ ನಂತರವೇ ವಿಮಾದಾರರು ಉಳಿದ ರೂ. 90 ನೀಡುವರು. ಉತ್ತಮ ಯೋಜನೆಯು ಕಂಪನಿಗೆ ದುಬಾರಿಯಾಗದೆ, ಉದ್ಯೋಗಿಗಳಿಗೆ ವೈದ್ಯಕೀಯ ವೆಚ್ಚವನ್ನು ಉಳಿಸುತ್ತದೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ, ನೀವು ಯೋಜನೆಯ ವಿವಿಧ ಅಂಶಗಳ ಮೇಲೆ ಸಹ-ವಿಮೆ ಮತ್ತು ಉಪ-ಮಿತಿಗಳನ್ನು, ತಮ್ಮ ಅಗತ್ಯದಂತೆ ಒಗ್ಗಿಸಬಹುದು. ಉದಾಹರಣೆಗೆ, ಆಂಬ್ಯುಲೆನ್ಸ್ ಶುಲ್ಕ ರೂ. 500 ಗಳ ಮಿತಿಯನ್ನು, ಅಥವಾ ಆಸ್ಪತ್ರೆಯ ಕೊಠಡಿ ಶುಲ್ಕ ದಿನಕ್ಕೆ ರೂ.1,000 ಗಳ ಮಿತಿಯನ್ನು ಹೊಂದಿರಬಹುದು. ಅಥವಾ ಹೆರಿಗೆ, OPD ಮುಂತಾದ ದುಬಾರಿಯಾದ ವೈದ್ಯಕೀಯ ವೆಚ್ಚಗಳಿಗೆ ನೀವು ಸಹ-ವಿಮೆಯ ಷರತ್ತುಗಳನ್ನು ಸೇರಿಸಬಹುದು. ಹೀಗೆ ಸಣ್ಣ ಬದಲಾವಣೆಗಳೊಂದಿಗೆ ಯೋಜನೆಯು ಕಂಪನಿ ಮತ್ತು ಉದ್ಯೋಗಿಗಳಿಗೆ ಲಾಭದಾಯಕವಾಗುವುದು.

ಗುಂಪು ನೀತಿ (ಗ್ರೂಪ್ ಪಾಲಿಸಿ) ಅಥವಾ ಗುಂಪು ನೀತಿಯ ಜೊತೆಗೆ ವೈಯಕ್ತಿಕ ಅಪಘಾತ ನೀತಿ (ಪರ್ಸನಲ್ ಆಕ್ಸಿಡೆಂಟ್ ಪಾಲಿಸಿ)?

ಗುಂಪು ನೀತಿಯು ಅನಾರೋಗ್ಯದ ಸಮಯದಲ್ಲಿ ನಿಮ್ಮ ಉದ್ಯೋಗಿಗಳಿಗೆ ರಕ್ಷಣೆ ನೀಡುತ್ತದೆ; ಆದರೆ ಅದರೊಂದಿಗೆ ವೈಯಕ್ತಿಕ ಅಪಘಾತ ನೀತಿಯನ್ನೂ ನೀಡಿದರೆ, ಅನಿರೀಕ್ಷಿತ ಅಪಘಾತದ ಸಂದರ್ಭದಲ್ಲಿ ಅವರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸಬಹುದು. ಉತ್ತಮ ವೈಯಕ್ತಿಕ ಅಪಘಾತ ನೀತಿಯು ಅಪಘಾತದಿಂದ ಉಂಟಾಗುವ ಸಾವು, ಶಾಶ್ವತ ಪೂರ್ತಿ ಅಂಗವೈಕಲ್ಯ, ಶಾಶ್ವತ ಭಾಗಶಃ ಅಂಗವೈಕಲ್ಯ ಮತ್ತು ತಾತ್ಕಾಲಿಕ ಪೂರ್ತಿ ಅಂಗವೈಕಲ್ಯದ ಸಂದರ್ಭದಲ್ಲಿ ವಿತ್ತೀಯ ಸಹಾಯವನ್ನು ಒದಗಿಸುತ್ತದೆ. ಕೆಲವು ಯೋಜನೆಗಳು ವಿಮೆ ಮಾಡಿದ ವ್ಯಕ್ತಿಯ ಸಾವಿನ ಸಂದರ್ಭದಲ್ಲಿ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಪೂರ್ವಸಿದ್ಧ ಹಣದ ನೆರವನ್ನು ನೀಡುತ್ತವೆ. ಕೆಲವು ಪಾಲಿಸಿಗಳು ಅಪಘಾತದಿಂದಾಗಿ ಉದ್ಯೋಗ ಕಳೆದುಕೊಂಡ ಸಂದರ್ಭದಲ್ಲಿ, ನಿರ್ದಿಷ್ಟ ಅವಧಿಯವರೆಗೆ ವಿತ್ತೀಯ ಪರಿಹಾರವನ್ನು ನೀಡುತ್ತವೆ. ಆಕಸ್ಮಿಕ ಅಪಘಾತದಿಂದ ಅನಿಶ್ಚಿತ ಸಮಯವನ್ನು ಎದುರಿಸಬಹುದಾದ ಉದ್ಯೋಗಿಗಳಿಗೆ ಈ ಪ್ರಯೋಜನಗಳು ಬಹಳ ಮುಖ್ಯ. ಇದರಿಂದ ಕಂಪನಿಗೆ ಸ್ವಲ್ಪ ಹೆಚ್ಚಿನ ಖರ್ಚಾದರೂ, ಇದು ಒದಗಿಸುವ ಸುರಕ್ಷತೆಯು ಅಮೂಲ್ಯವಾದುದು . 

ವಿಮೆ ಮಾಡಿದ ಮೊತ್ತ

ಎಂಪ್ಲಾಯರ್ ಆಗಿ ನೀವು, ಪ್ರತಿ ಉದ್ಯೋಗಿಗೆ ಎಷ್ಟು ಮೊತ್ತದ ವಿಮೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು. ನಿಮ್ಮ ಮೌಲ್ಯಮಾಪನದ ಆಧಾರದ ಮೇಲೆ ನಿಮ್ಮ ಉದ್ಯೋಗಿಗಳಿಗೆ ನೀವು 3 ಲಕ್ಷ, 5 ಲಕ್ಷ, 7 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಿಮೆಯನ್ನು ಒದಗಿಸಬಹುದು. ನೀವು ನಿಮ್ಮ ನೀತಿಯನ್ನು ಗ್ರಾಹಕೀಯಗೊಳಿಸಿ ವಿಭಿನ್ನ ಮಟ್ಟದ ಮೊತ್ತವನ್ನು ಸಹ ನೀಡಬಹುದು. ಉದಾಹರಣೆಗೆ, ಹೊಸ ಉದ್ಯೋಗಿ 3 ಲಕ್ಷದ ವ್ಯಾಪ್ತಿಯನ್ನು, ವ್ಯವಸ್ಥಾಪಕ ಮಟ್ಟದ ಉದ್ಯೋಗಿ 5 ಲಕ್ಷ ವ್ಯಾಪ್ತಿಯನ್ನು, ಮತ್ತು ನಿಮ್ಮ ಕಂಪನಿಯ ಆಡಳಿತಾತ್ಮಕ ಸದಸ್ಯ 7 ಲಕ್ಷ ವ್ಯಾಪ್ತಿಯನ್ನು ಪಡೆಯಬಹುದು. ಸೂಕ್ತವಾದ ವ್ಯಾಪ್ತಿಯನ್ನು ಒದಗಿಸಲು ನೀವು ಈ ರೀತಿಯ ವಿಭಾಗಗಳನ್ನು ರಚಿಸಬಹುದು.

ವ್ಯಾಪ್ತಿ(ಕವರೇಜ್)

ಯೋಜನೆಯ ವ್ಯಾಪ್ತಿಯು ಯಾರಿಗೆ ದೊರೆಯುತ್ತದೆ ಎಂಬುದನ್ನು ನೀವು ನಿರ್ಧರಿಸುವುದು ಅತ್ಯಗತ್ಯ. ಯೋಜನೆ ಕೇವಲ ಉದ್ಯೋಗಿಗೆ ಮಾತ್ರವೇ? ಉದ್ಯೋಗಿಗಳ ಜೊತೆಗೆ, ಅವರ ಅವಲಂಬಿತ ಕುಟುಂಬಕ್ಕಾಗಿ ಕಂಪನಿಯು ವ್ಯಾಪ್ತಿಯನ್ನು ಒದಗಿಸುವುದೇ? ಉದ್ಯೋಗಿಗಳ ಜೊತೆಗೆ ಅವರ ಕುಟುಂಬ ಮತ್ತು ಪೋಷಕರಿಗೂ ವ್ಯಾಪ್ತಿ ನೀಡುವುದೇ? ಅಥವಾ ಕಂಪನಿಯು, ಉದ್ಯೋಗಿ ಮತ್ತು ಅವರ ಕುಟುಂಬದವರಿಗೆ ಒಂದು ಯೋಜನೆ ಮತ್ತು ಪೋಷಕರಿಗೆ ಮತ್ತೊಂದು ಯೋಜನೆಯನ್ನು ಹೊಂದಿರುವ ನೀತಿಯನ್ನು ಹುಡುಕಬೇಕೇ? ಗುಂಪು ನೀತಿಗಳು ವಿವರವಾದ ಗ್ರಾಹಕೀಕರಣಗಳಿಗೆ ಅವಕಾಶ ನೀಡುವುದರಿಂದ, ಈ ರೀತಿಯ ಅನೇಕ ಸಂಯೋಜನೆಗಳನ್ನು ಗಮನಿಸಿ ಸೂಕ್ತವಾದ ನೀತಿಯನ್ನು ಖರೀದಿಸಬಹುದು.

ವಿಮಾ ಕಂಪನಿಯ ಕಾರ್ಯಕ್ಷಮತೆ (ಪರ್ಫಾರ್ಮೆನ್ಸ್)

ವಿವಿಧ ವಿಮಾ ಕಂಪನಿಗಳ ಕಾರ್ಯಕ್ಷಮತೆ / ರೇಟಿಂಗ್‌ಗಳನ್ನು ತಿಳಿಯಲು ಮತ್ತು ಹೋಲಿಸಲು ಅವುಗಳ ಕ್ಲೇಮ್ ಅನುಪಾತ, ಕ್ಲೇಮ್ ಸಲ್ಲಿಸುವ ಸೌಲಭ್ಯ, ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಒಗ್ಗಿಸಲಾಗುವ ಕಾರ್ಪೊರೇಟ್ ಯೋಜನೆಗಳು, ಮುಂತಾದ ಅಂಶಗಳನ್ನು ಬಳಸಬಹುದು. ಪ್ರೀಮಿಯಂಗಳ ವೆಚ್ಚದ ಜೊತೆಗೆ, ವಿಮಾದಾರನು ಒದಗಿಸುವ ಸೇವೆಯ ಗುಣಮಟ್ಟವನ್ನು ಸಹ ಎಂಪ್ಲಾಯರ್ ಗಮನಿಸಬೇಕಾಗುತ್ತದೆ. ವಿಮಾ ಯೋಜನೆ ವಿಮಾ ಕಂಪನಿಯು ಒದಗಿಸುವ ಸೇವೆಯಷ್ಟೇ ಉತ್ತಮವಾಗಿರುತ್ತದೆ.

ನೌಕರರ ಆದ್ಯತೆ

ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಿಗೆ ಇದು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ಎಂಪ್ಲಾಯರ್ ನಿರ್ಧಾರ ತೆಗೆದುಕೊಳ್ಳುವ ಮೊದಲು ನೌಕರರ ಆದ್ಯತೆಗಳನ್ನು ಅಳೆಯಬಹುದು. ಹೀಗೆ ಅವರು ತಮ್ಮ ಕಂಪನಿಯ ನೌಕರರ ಪ್ರೊಫೈಲ್‌ಗೆ ಸೂಕ್ತವಾದ ಯೋಜನೆಯನ್ನು ಖರೀದಿಸಬಹುದು.

ಹೀಗೆ, ನಿಮ್ಮ ಕಂಪನಿಯಲ್ಲಿ ಕೆಲಸ ಮಾಡುವವರ ಆರ್ಥಿಕ ರಕ್ಷಣೆಯ ಪ್ರಾಥಮಿಕ ಉದ್ದೇಶದೊಂದಿಗೆ,  ಗುಂಪು ಯೋಜನೆಯನ್ನು ಖರೀದಿಸುವ ಮೊದಲು ಈ ಪ್ರಮುಖ ಅಂಶಗಳನ್ನು ನೆನಪಿನಲ್ಲಿಡಿ.

Photo by Brooke Lark on Unsplash.

    Request for a free health insurance consultation

    Fields marked with an * are required


    Leave a Reply

    Your email address will not be published.