ಹಿರಿಯ ನಾಗರಿಕ(ಸೀನಿಯರ್ ಸಿಟಿಜನ್) ವಿಮಾ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು

ವೃದ್ಧಾಪ್ಯದಲ್ಲಿ ಉತ್ತಮ ಆರೋಗ್ಯ ರಕ್ಷಣೆ ಇರುವುದು ಅನಿವಾರ್ಯ. ಹಿರಿಯ ನಾಗರಿಕ ಯೋಜನೆಗಳನ್ನು, ವಯಸ್ಸಾದವರಿಗೆ ಉತ್ತಮ ಆರೋಗ್ಯ ಕವರೇಜ್ ಒದಗಿಸುವ ದೃಷ್ಟಿಯಿಂದ ರೂಪಿಸಲಾಗುತ್ತದೆ.

ವಯಸ್ಸಾದಂತೆ, ಒಬ್ಬ ವ್ಯಕ್ತಿಯ ವೈದ್ಯಕೀಯ ವೆಚ್ಚಗಳು ಹೆಚ್ಚಾಗುತ್ತವೆ. ಆದಾಯ ಕಡಿಮೆಯಾಗುತ್ತದೆ, ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ, ಕಾಯಿಲೆಗಳು ಹೆಚ್ಚಾಗುತ್ತವೆ ಮತ್ತು  ಚಿಕಿತ್ಸೆ ಖರ್ಚುಗಳ ರಾಶಿ ಬೆಳೆಯುತ್ತದೆ. ಈ ವಯಸ್ಸಿನಲ್ಲಿ ಉತ್ತಮ ಆರೋಗ್ಯ ರಕ್ಷಣೆ ಇರುವುದು ಅನಿವಾರ್ಯ. ಇಂತಹ ಪರಿಸ್ಥಿತಿಗೆ ಹಲವು ಸಮಾಧಾನಗಳಿವೆ.

ಖರೀದಿಸುವ ಸರಿಯಾದ ಸಮಯ ಯಾವುದು?

ಹಿರಿಯ ನಾಗರಿಕ ಯೋಜನೆಗಳು ಹೆಚ್ಚು ಸೀಮಿತವಾಗಿರುತ್ತವೆ, ಆದ್ದರಿಂದ 60 ವರ್ಷದ ನಂತರ ಅವುಗಳನ್ನು ಖರೀದಿಸುವುದು ಸೂಕ್ತವಲ್ಲ. IRDAI  ಜನರಿಗೆ ಜೀವನಪೂರ್ತಿ ತಮ್ಮ ಯೋಜನೆಯನ್ನು ನವೀಕರಿಸಲು ಅನುಮತಿ ನೀಡುತ್ತದೆ, ಅಂದರೆ ನೀವು ‘ಸಕ್ರಮ ಯೋಜನೆ’ ಯನ್ನು ಮೊದಲೇ ಖರೀದಿಸಿ ಅದನ್ನು ಇಡೀ ಜೀವನ ಮುಂದುವರಿಸಬಹುದು. ಹೇಗೆ, ನಿಮಗೆ 60 ವರ್ಷ ತುಂಬುವ ಮೊದಲೇ ಕಾಯುವ ಅವಧಿಯು ದಾಟಿ, ಯೋಜನೆಯು ನಿಮ್ಮ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳಿಗೆ ಕವರೇಜ್ ನೀಡುತ್ತದೆ. ಆದರೆ ನೀವು ನಂತರ ಹಿರಿಯ ನಾಗರಿಕ ಯೋಜನೆಯನ್ನು ಖರೀದಿಸಿದರೆ, ಅನೇಕ ತಡೆಗಳನ್ನು ಎದುರಿಸಬೇಕಾಗುತ್ತದೆ.

ಹಿರಿಯ ನಾಗರಿಕ ಆರೋಗ್ಯ ವಿಮಾ ಯೋಜನೆಗಳ ಪ್ರಮುಖ ಲಕ್ಷಣಗಳು ಯಾವುವು?

ಹಿರಿಯ ನಾಗರಿಕ ಯೋಜನೆಗಳನ್ನು, ವಯಸ್ಸಾದವರಿಗೆ ಉತ್ತಮ ಆರೋಗ್ಯ ಕವರೇಜ್ ಒದಗಿಸುವ ದೃಷ್ಟಿಯಿಂದ ರೂಪಿಸಲಾಗುತ್ತದೆ. ಅವುಗಳ ಕೆಲವು ಪ್ರಮುಖ ಲಕ್ಷಣಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ:

  1. ಯೋಜನೆಯನ್ನು ಖರೀದಿಸುವ ವಯಸ್ಸು – ಹಿರಿಯ ನಾಗರಿಕ-ನಿರ್ದಿಷ್ಟ ಯೋಜನೆಯನ್ನು, ವಿಮಾದಾರರು ಉಲೇಖಿಸಿದ ಕನಿಷ್ಠ ವಯಸ್ಸನ್ನು ಮುಟ್ಟಿದ ನಂತರ ಮಾತ್ರ ಖರೀದಿಸಬಹುದು. ಹೆಚ್ಚಿನ ಯೋಜನೆಗಳು ಕೇವಲ ಕನಿಷ್ಟ ಮಿತಿಯನ್ನು (60 ವರ್ಷಗಳು) ಹೊಂದಿರುತ್ತವೆ. ಆದರೆ ಕೆಲವು ಯೋಜನೆಗಳು ಗರಿಷ್ಠ ವಯಸ್ಸಿನ ಮಿತಿಯನ್ನು ಕೂಡ ನಮೂದಿಸುತ್ತವೆ. ಉದಾಹರಣೆಗೆ, ಸ್ಟಾರ್ ಹೆಲ್ತ್‌ನ ರೆಡ್ ಕಾರ್ಪೆಟ್ ಯೋಜನೆಯು, 75 ಕ್ಕಿಂತ ಹೆಚ್ಚಿನ ವಯಸ್ಕರಿಗೆ ಹಿರಿಯ-ನಾಗರಿಕ ಯೋಜನೆಯನ್ನು ಖರೀದಿಸಲು ಅನುಮತಿಸುವುದಿಲ್ಲ. ಈ ಸಂದರ್ಭದಲ್ಲಿ ಸೂಪರ್(ವಿಶಿಷ್ಟ) ಹಿರಿಯ ನಾಗರಿಕ ಯೋಜನೆಯನ್ನು ಖರೀದಿಸಬಹುದು. 
  2. ಸಹ-ಪಾವತಿ(ಕೋ ಪೇಮೆಂಟ್) – ಸಹ-ಪಾವತಿ ಎಂದರೆ, ವೈದ್ಯಕೀಯ ಖರ್ಚನ್ನು ನಿಮ್ಮ ಮತ್ತು ನಿಮ್ಮ ವಿಮಾದಾರರ ನಡುವೆ ಪೂರ್ವ ನಿರ್ಧಾರಿತ ಪ್ರಮಾಣದಲ್ಲಿ ಹಂಚಿಕೊಳ್ಳಲಾಗುತ್ತದೆ. ಉದಾಹರಣೆಗೆ, ರೆಲಿಗೇರ್ ಹಿರಿಯ ನಾಗರಿಕ ಯೋಜನೆಯು ಪ್ರತಿ ಕ್ಲೈಮ್‌ಗೆ 20% ಸಹ-ಪಾವತಿ ಷರತ್ತು ಹೊಂದಿರುತ್ತದೆ. ಇದರರ್ಥ ಎಲ್ಲಾ ಕ್ಲೈಮ್‌ಗಳ 20% ಮೊತ್ತವನ್ನು ವಿಮಾದಾರರು, ಮತ್ತು ಉಳಿದ 80% ಮೊತ್ತವನ್ನು ನೀವು ಕೊಡಬೇಕಾಗುತ್ತದೆ.
  3. ನಿಯಮಿತ ಆರೋಗ್ಯ ತಪಾಸಣೆ – ಉದಾಹರಣೆಗೆ, ರೆಲಿಗೇರ್ ಕೇರ್ ಸೀನಿಯರ್, ಕ್ಲೇಮ್ ಇತಿಹಾಸವನ್ನು ಲೆಕ್ಕಿಸದೆ, ಎಲ್ಲಾ ಪಾಲಿಸಿದಾರರಿಗೆ ನಿಯುಕ್ತ ಆಸ್ಪತ್ರೆಗಳಲ್ಲಿ ವಾರ್ಷಿಕ, ಸಂಪೂರ್ಣ ಆರೋಗ್ಯ ತಪಾಸಣೆಯನ್ನು ಒದಗಿಸುತ್ತದೆ. ಈ ಯೋಜನೆಯ ಮತ್ತೊಂದು ದೊಡ್ಡ ಪ್ರಯೋಜನವೆಂದರೆ, ನೀವು ಅನ್ಯ ವೈದ್ಯರಿಂದ ಎರಡನೇ ಅಭಿಪ್ರಾಯವನ್ನು ಪಡೆಯಬೇಕಾದರೆ, ಆ ವೆಚ್ಚವನ್ನು ಸಹ ಪೂರೈಸುತ್ತದೆ.
  4. ವೈಯಕ್ತಿಕ ಆರೈಕೆ – ಆದಿತ್ಯ ಬಿರ್ಲಾ ಆಕ್ಟಿವ್ ಕ್ಯೆರ್ ನಂತಹ ಕೆಲವು ಹಿರಿಯ ನಾಗರಿಕ ಆರೋಗ್ಯ ಯೋಜನೆಗಳು ವ್ಯಕ್ತಿಗತ ಆರೈಕೆಗಾಗಿ ಒದಗಿಸುತ್ತವೆ. ವಿಮೆ ಮಾಡಿದ ಮೊತ್ತವು 5 ಲಕ್ಷಕ್ಕಿಂತ ಹೆಚ್ಚಾಗಿದ್ದರೆ, ಅವರು ಅನಿಯಮಿತ ಆರೋಗ್ಯ ತರಬೇತಿಯನ್ನು ಒದಗಿಸುತ್ತಾರೆ. ಅವರ ಆರೋಗ್ಯ ತರಬೇತುದಾರರು ಜೀವನಶೈಲಿಯನ್ನು ಕುರಿತು ಸಲಹೆಗಳನ್ನು ನೀಡುತ್ತಾರೆ. ಮುಖ್ಯವಾಗಿ, ಮನೆಯಲ್ಲಿ ವೃದ್ಧರನ್ನು ನೋಡಿಕೊಳ್ಳಲು ಅವರು ಅರ್ಹ ನರ್ಸ್ ರನ್ನು ಒದಗಿಸುತ್ತಾರೆ.
  5. ಕವರೇಜ್ ಮೊತ್ತವನ್ನು ತಕ್ಷಣ ಮರಳಿಸುವುದು – ಹೆಚ್ಚಿನ ಹಿರಿಯ ನಾಗರಿಕ ಯೋಜನೆಗಳು, ವಿಮೆ ಮಾಡಿದ ಪೂರ್ತಿ ಮೊತ್ತದ ಮರುಸ್ಥಾಪಾನೆ ಮಾಡುತ್ತವೆ. ಉದಾಹರಣೆಗೆ, ಟಾಟಾ ಎಐಜಿ, ರೆಲಿಗೇರ್ ಮತ್ತು ಆದಿತ್ಯ ಬಿರ್ಲಾ, ಈ  ಸೌಲಭ್ಯ  ಒದಗಿಸುತ್ತವೆ . ಕ್ಲೇಮ್ ಮಾಡುವುದರ ಮೂಲಕ ನಿಮ್ಮ ಕವರೇಜ್ ಹಣ ಖಾಲಿಯಾದರೆ, ಅದನ್ನು ಸಂಪೂರ್ಣವಾಗಿ ಪುನಃಸ್ಥಾಪನೆ ಮಾಡುತ್ತವೆ. ಹೀಗೆ ಎಲ್ಲ ಸಮಯದಲ್ಲೂ ನಿಮಗೆ ವಿಮೆಯ ರಕ್ಷಣೆ ಇರುತ್ತದೆ. 
  6. ಕಾಯುವ ಅವಧಿ (ವೈಟಿಂಗ್  ಪಿರಿಯಡ್) – ಹಿರಿಯ ನಾಗರಿಕ ಯೋಜನೆಗಳು ಮೊದಲ 30 ದಿನಗಳಲ್ಲಿ, ಅಪಘಾತಗಳ ಹೊರತಾಗಿ ಯಾವುದೇ ರೋಗಗಳಿಗೆ ಕವರೇಜ್ ನೀಡುವುದಿಲ್ಲ. ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳಿಗೆ ಸಾಮಾನ್ಯವಾಗಿ 4 ವರ್ಷಗಳ ನಂತರ ಮಾತ್ರ ಕವರೇಜ್ ದೊರಕುತ್ತದೆ, ಮತ್ತು ಅನಾರೋಗ್ಯ ಆಧಾರಿತವಾದ 2-4 ವರ್ಷಗಳ ಕಾಯುವ ಅವಧಿಗಳಿರಬಹುದು. ಕೆಲವು ವಿಮಾದಾರರು 2 ವರ್ಷಗಳ ನಂತರ, ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳಿಗೆ ಕವರೇಜ್ ನೀಡುತ್ತಾರೆ; ಆದರೆ ಈ ಸಂದರ್ಭದಲ್ಲಿ ವಿಮಾದಾರರು, ವಿಮೆಯ ಮೊತ್ತದ 50% ರಷ್ಟು ಮಾತ್ರ ಪಾವತಿಸಬಹುದು.
  7. ಉಪ-ಮಿತಿಗಳು (ಸಬ್ ಲಿಮಿಟ್ಸ್) – ಉಪ-ಮಿತಿಗಳು ವೈದ್ಯರ ಶುಲ್ಕ, ಕೊಠಡಿ ಶುಲ್ಕ, ನರ್ಸಿಂಗ್ ವೆಚ್ಚ, ಆಪರೇಷನ್ ಶುಲ್ಕ ಮುಂತಾದ ನಿರ್ದಿಷ್ಟ ಖರ್ಚುಗಳ ಮೇಲಿನ ನಿರ್ದಿಷ್ಟ ಮಿತಿಗಳು. ಉದಾಹರಣೆಗೆ, ಕಣ್ಣಿನ ಪೊರೆ, ಮೊಣಕಾಲು ನೋವು ಅಥವಾ ಮುರಿದ ಮೂಳೆ ಮುಂತಾದುವುಗಳು ವೃದ್ಧಾಪ್ಯದ ಸಾಮಾನ್ಯ ದೂರುಗಳು. ರೆಲಿಗೇರ್ ಕೇರ್ ನಂತಹ ಯೋಜನೆಯು, ನಿಮ್ಮ ವಿಮೆಯ ಒಟ್ಟು ಮೊತ್ತ ರೂ. 4 ಲಕ್ಷ ವಾಗಿದ್ದರೂ, ಉಪ ಮಿತಿಗಳ ಅಡಿಯಲ್ಲಿ, ಪ್ರತಿ ಕಣ್ಣಿಗೆ ಪೊರೆ ತೆಗೆಯಲು ರೂ. 30,000, ಮೊಣಕಾಲಿನ ಆಪರೇಷನ್ ಗೆ ರೂ. 1 ಲಕ್ಷ, ಮತ್ತು ಮುರಿದ ಮೂಳೆಗಳಿಗೆ ರೂ. 2.5 ಲಕ್ಷ ಮಾತ್ರ ನೀಡುತ್ತದೆ.
  8. ಸಂಪೂರ್ಣ ವೈದ್ಯಕೀಯ ಪರೀಕ್ಷೆ – ವಯಸ್ಸಾದವರಿಗೆ ಹೆಚ್ಚಿನ ಅನಾರೋಗ್ಯ ತೊಂದರೆಗಳಿರುತ್ತವೆ. ಆದ್ದರಿಂದ, ಕೆಲವು ವಿಮಾದಾರರು ಪಾಲಿಸಿಯನ್ನು ನೀಡುವ ಮೊದಲು ಸಂಪೂರ್ಣ ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡುತ್ತಾರೆ. ಸಾಮಾನ್ಯವಾಗಿ, ಅವರು ತಮ್ಮ ನಿಯಮಿತ ಆಸ್ಪತ್ರೆಗಳಲ್ಲಿ ಪರೀಕ್ಷೆಗಳನ್ನು ಮಾಡುತ್ತಾರೆ ಅಥವಾ ಇತರ ಕೇಂದ್ರಗಳಲ್ಲಿ ಮಾಡಿದ ಪರೀಕ್ಷೆಗಳಿಗೆ ನಿಮಗೆ ಮರುಪಾವತಿ ಮಾಡುತ್ತಾರೆ. ಪಾಲಿಸಿಯನ್ನು ಖರೀದಿಸುವ ಮೊದಲು ವಿಮೆ ಮಾಡಿದ ಹಿರಿಯ ವ್ಯಕ್ತಿಯ ವೈದ್ಯಕೀಯ ದಾಖಲೆಯನ್ನು ಸರಿಯಾಗಿ ದರ್ಜು ಮಾಡಿದರೆ, ಕ್ಲೇಮ್ ಪ್ರಕ್ರಿಯೆಯಲ್ಲಿ ಸಂಭವಿಸುವ ವಿವಾದಗಳನ್ನು ತಪ್ಪಿಸಬಹುದು.

ಒನ್‌ಅಶ್ಯೂರ್ ಡಿಸ್ಟ್ರಿಬ್ಯೂಶನ್ ಪ್ಲಾಟ್ ಫಾರ್ಮ್ ಆಗಿದ್ದು, ಆರೋಗ್ಯ ಮತ್ತು ಹಣಕಾಸು ಒಗ್ಗೂಡುವ ವಿಷಯಗಳಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ವಿಮೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು oneassure.in ಗೆ ಭೇಟಿ ನೀಡಿ.

    Request for a free health insurance consultation

    Fields marked with an * are required


    Leave a Reply

    Your email address will not be published.